ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತರಾದ ಮೇಘಾಶೆಟ್ಟಿಗೆ ಚಿತ್ರರಂಗದಿಂದ ತುಂಬಾನೇ ಆಫರ್ಗಳಿದ್ದವು. ಮೇಘಾ ಶೆಟ್ಟಿ ಅಭಿನಯಿಸಿದ ಮೊದಲ ಸಿನಿಮಾ ತ್ರಿಬ್ಬಲ್ ರೈಡಿಂಗ್. ಆದರೆ ರಿಲೀಸ್ ಆದ ಫಸ್ಟ್ ಮೂವಿ ದಿಲ್ ಪಸಂದ್. ದಿಲ್ ಪಸಂದ್ ಕಳೆದ ವಾರ ರಿಲೀಸ್ ಆಗಿದ್ದರೆ, 2ನೇ ಸಿನಿಮಾ ಆಗಿ ರಿಲೀಸ್ ಆಗುತ್ತಿರುವುದು ಅವರ ಮೊದಲ ಸಿನಿಮಾ ತ್ರಿಬ್ಬಲ್ ರೈಡಿಂಗ್.
ಟ್ರಿಬಲ್ ರೈಡಿಂಗ್ ನನಗೆ ಅಧಿಕೃತವಾಗಿ ಮೊದಲ ಚಿತ್ರ. ಟಿವಿಯಿಂದ ಸಿನಿಮಾಗೆ ಬರುವ ಯೋಚನೆಯಲ್ಲಿದ್ದಾಗ ನಾನು ಒಪ್ಪಿಕೊಂಡ ಸಿನಿಮಾ ಇದು. ಹೀಗಾಗಿ ನನಗೆ ಟ್ರಿಬಲ್ ರೈಡಿಂಗ್ ವಿಶೇಷವಾಗಿದೆ. ಆದರೆ ದಿಲ್ ಪಸಂದ್ ಮೊದಲು ಬಿಡುಗಡೆಯಾಯಿತು. ನಾನು ಟ್ರಿಬಲ್ ರೈಡಿಂಗ್ನಲ್ಲಿ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದು, ಪಾತ್ರದ ಹೆಸರು ರಕ್ಷಿತಾ ಎನ್ನುತ್ತಾರೆ ಮೇಘಾ ಶೆಟ್ಟಿ.
ನನ್ನ ಜೀವಮಾನದಲ್ಲಿ ಸಿಕ್ಕ ಮೊದಲ ಅವಕಾಶದಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಕೆಲಸ ಮಾಡುವುದು ಥ್ರಿಲ್ಲ ಕೊಟ್ಟಿತು. ಇದು ಔಟ್ & ಔಟ್ ಕಾಮಿಡಿ ಸಿನಿಮಾ. ನನ್ನೊಂದಿಗೆ ಆದಿತಿ ಪ್ರಭುದೇವ ಹಾಗೂ ರಚನಾ ಇಂದರ್ ಕೂಡಾ ಇದ್ದಾರೆ. ಎಲ್ಲರ ಪಾತ್ರವನ್ನೂ ನಿರ್ದೇಶಕ ಮಹೇಶ್ ಗೌಡ ಚೆನ್ನಾಗಿ ತೋರಿಸಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆಯೂ ಭರ್ಜರಿಯಾಗಿದೆ ಎಂದಿದ್ದಾರೆ ಮೇಘಾ.