ಗೋಲ್ಡನ್ ಸ್ಟಾರ್ ಗಣೇಶ್. ಆದಿತಿ ಪ್ರಭುದೇವ. ಮೇಘಾ ಶೆಟ್ಟಿ. ರಚನಾ ಇಂದರ್.. ಇವರೆಲ್ಲರ ಜೊತೆ ರೈಡ್ ಹೋಗಬಹುದು. ಬೈಕಿನಲ್ಲೇ. ನೀವು ಮಾಡಬೇಕಾದ್ದು ಇಷ್ಟೆ. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡಿನಲ್ಲಿ ಗಣೇಶ್ ಅವರು ಹಾಕಿರೋ ಸಿಂಪಲ್ ಸ್ಟೆಪ್ಸ್‍ನ ರೀಲ್ಸ್ ಮಾಡಬೇಕು. ಸ್ಟೆಪ್ ಸಖತ್ತಾಗಿದ್ದರೆ ಗಣೇಶ್, ಆದಿತಿ ಮತ್ತು ಮೇಘಾ ಅವರ ಜೊತೆ ರೈಡ್ ಹೋಗಬಹುದು. ತ್ರಿಬಲ್ ರೈಡಿಂಗ್ ಚಿತ್ರದ ಆಫರ್ ಇದು.
ಮುಗುಳುನಗೆ ನಂತರ ಗಣೇಶ್ ಚಿತ್ರದಲ್ಲಿ ಇಷ್ಟೊಂದು ಹೀರೋಯಿನ್ಸ್ ಇದ್ದಾರೆ. ಕಾಮಿಡಿ ರೊಮ್ಯಾಂಟಿಕ್ ಮೂವಿಗೆ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ತ್ರಿಬಲ್ ರೈಡಿಂಗ್ ನವೆಂಬರ್ 25ರಂದು ರಿಲೀಸ್ ಆಗುತ್ತಿದೆ.
ಗೂಗಲ್ಲಿನಲ್ಲೂ ಇಲ್ಲ.. ಅಂತೋನು ಈ ರಂಗೀಲ..
ಎಲ್ಲಾನೂ ಖುಲ್ಲಂಖುಲ್ಲಾ..
ಈ ಸೆಂಚುರಿ ಸುಂದರ ನಮ್ ಗಣಪ.. ಎಂದು ಶುರುವಾಗುವ ಹಾಡನ್ನ ಕ್ಯಾರಿ ಮಾಡುವುದೇ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್. ಹೀ ಈಸ್ ದ ಗೋಲ್ಡನ್ ಸ್ಟಾರ್.. ರಿದಮ್.
ಸಾಯಿ ಕಾರ್ತಿಕ್ ಸಂಗೀತ ಕುಣಿದು ಕುಪ್ಪಳಿಸುವಂತ ಮ್ಯೂಸಿಕ್ಕಿದೆ. ವಿಜಯ್ ಪ್ರಕಾಶ್ ಹಾಡಿರುವ ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೊಟ್ಟಿದ್ದಾರೆ.