ರಾಣ. ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಪ್ರಧಾನ ಪಾತ್ರದಲ್ಲಿರೋ ಸಿನಿಮಾ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಡ್ರಾಮಾ ಇರೋ ಸಿನಿಮಾ ರಾಣ. ನಂದ ಕಿಶೋರ್ ಒಂದು ಪವರ್‍ಫುಲ್ ಎಂಟರ್‍ಟೇನ್‍ಮೆಂಟ್ ಪ್ಯಾಕೇಜ್ ರೆಡಿ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಇಷ್ಟೇ ಅಲ್ಲ, ಒಂದು ಚೆಂದದ ಮೆಸೇಜ್ ಕೂಡಾ ಇದೆ.
ಉಧೋ ಉಧೋ ಹುಲಿಗೆಮ್ಮ.. ಹಾಡು ಉತ್ತರ ಕರ್ನಾಟಕದವರಿಗೆ ಮೆಚ್ಚುಗೆಯಾಗುವುದು ಖಚಿತ. ಭಕ್ತರಿಗಂತೂ ಹೇಳಿ ಮಾಡಿಸಿದಂತಿದೆ. ಚಂದನ್ ಶೆಟ್ಟಿ ಹಾಡು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತೆ.
ಗಲ್ಲಿಬಾಯ್ ಹಾಡು ರೊಮ್ಯಾಂಟಿಕ್ ಆಗಿದ್ದರೆ, ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿರುವ ಮಳ್ಳಿ ಮಳ್ಳಿ ಹಾಡು ಕುರ್ಚಿಯಲ್ಲಿ ಕುಳಿತವರೂ ಡ್ಯಾನ್ಸ್ ಮಾಡುವಂತಿದೆ.
ಪೊಲೀಸ್ ಆಫೀಸರ್ ಆಗುವ ಕನಸು ಹೊತ್ತು ಹಳ್ಳಿಯಿಂದ ಸಿಟಿಗೆ ಬರುವ ನಾಯಕ ಎದುರಿಸುವ ಸವಾಲುಗಳ ಕಥೆ ಚಿತ್ರದಲ್ಲಿದೆ. ಲವ್ ಸ್ಟೋರಿಯಲ್ಲಿ ರೀಷ್ಮಾ ನಾಣಯ್ಯ ಜಾತಕಕ್ಕೆ ಶ್ರೇಯಸ್ ಮಂಜು ಜಾತಕ ಹೊಂದಾಣಿಕೆಯಾಗಬೇಕು. ಕ್ಯೂಟ್ ಲವ್ ಸ್ಟೋರಿ ಮಧ್ಯೆ ಕಿಸ್ಸಿಂಗ್ ರೊಮ್ಯಾನ್ಸ್ ಎಲ್ಲವೂ ಇದೆ.
ಚಿತ್ರದಲ್ಲಿರುವ ಪವರ್ ಫುಲ್ ಆ್ಯಕ್ಷನ್ ಸೀನ್ಸ್ ಪ್ರೇಕ್ಷಕರ ಮೈನವಿರೇಳಿಸುವಂತಿದೆ. ಎಲ್ಲದರ ಜೊತೆಗೊಂದು ಚೆಂದದ ಸಂದೇಶವೂ ಇದೆ. ರಾಣ ಚಿತ್ರದ ಹೈಲೈಟ್ಸ್ ಇದು. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣ ಚಿತ್ರ ಈಗ ಥಿಯೇಟರಿನಲ್ಲಿದೆ.