ರಾಣಾ. ನಾಳೆ ಬಿಡುಗಡೆಯಾಗುತ್ತಿರುವ ಶ್ರೇಯಸ್ ಮಂಜು ಸಿನಿಮಾ. ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಆ್ಯಕ್ಷನ್-ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಇರೋ ಚಿತ್ರದ ಟೈಟಲ್, ರಾಣಾ ತಂಡಕ್ಕೆ ಸಿಕ್ಕಿದ್ದರ ಹಿಂದೊಂದು ಕಥೆಯಿದೆ. ಏಕೆಂದರೆ ಈ ರಾಣಾ ಅನ್ನೋ ಟೈಟಲ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡಬೇಕಿತ್ತು.
ಗಜಕೇಸರಿ ಚಿತ್ರ ಯಶಸ್ವಿಯಾದ ನಂತರ ಎ.ಹರ್ಷ ಮತ್ತು ಯಶ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗಬೇಕಿದ್ದ ಸಿನಿಮಾಗೆ ರಾಣಾ ಅನ್ನೋ ಟೈಟಲ್ ಇಡಲಾಗಿತ್ತು. ನಿರ್ಮಾಪಕ ರಮೇಶ್ ಕಶ್ಯಪ್ ರೆಡಿಯಾಗಿದ್ದರು. ಆದರೆ ಸಿನಿಮಾ ಟೇಕಾಫ್ ಆಗಲಿಲ್ಲ. ಕೊನೆಗೆ ಶ್ರೇಯಸ್ ಮಂಜು ಚಿತ್ರಕ್ಕೆ ಪವರ್‍ಫುಲ್ ಟೈಟಲ್ ಬೇಕು ಎನ್ನಿಸಿದಾಗ ರಾಣಾ ಟೈಟಲ್ ನೆನಪಾಯ್ತು. ರಮೇಶ್ ಕಶ್ಯಪ್ ಬಳಿ ಕೇಳಿ ಚಿತ್ರದ ಟೈಟಲ್ ತೆಗೆದುಕೊಂಡವರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.
ರಾಣಾ ಎಂದರೆ ಮಹಮ್ಮದ್ ಘಜ್ನಿಯ ವಿರುದ್ಧ ಅಪ್ರತಿಮ ಹೋರಾಟ ಮೆರೆದಿದ್ದ ರಾಣಾ ಪ್ರತಾಪ್ ಸಿಂಗ್ ನೆನಪಾಗುತ್ತಾರೆ. ರಾಣಾ ಎಂದರೇನೇ ಯೋಧ. ಚಿತ್ರದ ಕಥೆಗೆ ತಕ್ಕಂತೆ ಮ್ಯಾಚ್ ಆಗುತ್ತೆ ಎನ್ನಿಸಿತು ಎನ್ನುತ್ತಾರೆ ಶ್ರೇಯಸ್ ಮಂಜು. ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.