ಸಿನಿಮಾ ಟ್ರೇಲರ್ ನೋಡಿದವರಿಗೆ ಇದು ಆ್ಯಕ್ಷನ್ ಡ್ರಾಮಾ ಎನ್ನಿಸಬಹುದು. ಆದರೆ ಹಾಗಿಲ್ಲ. ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ, ಎಮೋಷನ್ಸ್ ಎಲ್ಲವೂ ಇದೆ. ಇಡೀ ಸಿನಿಮಾ ಒಂದು ಕಂಪ್ಲೀಟ್ ಎಂಟರ್‍ಟೈನ್‍ಮೆಂಟ್ ಪ್ಯಾಕೇಜ್ ಎನ್ನುತ್ತಾರೆ ರೀಷ್ಮಾ. ರಾಣಾ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಿಟ್ಟುಕೊಂಡಿರೋ ರೀಷ್ಮಾ ನಾಣಯ್ಯ ನ.11ರ ಬಿಡುಗಡೆಗೆ ಕಾಯುತ್ತಿದ್ದಾರೆ.
ಚಿತ್ರದಲ್ಲಿ ನನ್ನದು ಪ್ರಿಯಾ ಅನ್ನೋ ಹುಡುಗಿಯ ಪಾತ್ರ. ಆಗಿಹೋಗಿದ್ದರ ಬಗ್ಗೆ ಭವಿಷ್ಯದ ಬಗ್ಗೆ ಯೋಚಿಸುವ ಹುಡುಗಿ. ಈಗಿನದ್ದನ್ನು ಸಂಭ್ರಮಿಸಬೇಕು ಎನ್ನುವ ಮನಸ್ಥಿತಿಯವಳು. ಸಿನಿಮಾದಲ್ಲಿ ಲವ್ ಟ್ರ್ಯಾಕ್ ಹೊಸದಾಗಿ ಶುರುವಾಗುವುದಿಲ್ಲ. ಲವ್ ಟ್ರ್ಯಾಕ್ ಜೊತೆ ಜೊತೆಯಲ್ಲೇ ಕಥೆಯೂ ಸಾಗುತ್ತೆ. ಈ ನಡುವೆ ನಾಯಕ ಎದುರಿಸುವ ಸವಾಲುಗಳಿಗೆ ನಾಯಕಿ ಹೇಗೆ ಜೊತೆ ನಿಲ್ಲುತ್ತಾಳೆ ಎನ್ನುವ ಕಥೆ ಚಿತ್ರದಲ್ಲಿದೆ ಎನ್ನುವ ರೀಷ್ಮಾ, ಚಿತ್ರದ ಹೀರೋ ಶ್ರೇಯಸ್ ಮಂಜು ಹಾಗೂ ನಿರ್ದೇಶಕ ನಂದ ಕಿಶೋರ್ ¨ಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಾರೆ.
ಸ್ವತಃ ನಂದಕಿಶೋರ್ ಚಿತ್ರದ ಶ್ರೇಯಸ್ ಮಂಜು ಅವರ ಎದುರು ನಿಮಗೆ ನನ್ನ ಪರ್ಫಾಮೆನ್ಸ್ ಇಷ್ಟವಾಯಿತೋ.. ರೀಷ್ಮಾ ಅವರ ಪರ್ಫಾಮೆನ್ಸ್ ಇಷ್ಟವಾಯಿತೋ ಎಂದರೂ ಡೈರೆಕ್ಟರ್ ಹೇಳೋದು ರೀಷ್ಮಾ ನಾಣಯ್ಯ ಹೆಸರನ್ನೇ. ಚಿತ್ರದ ಪ್ರತಿಯೊಂದು ದೃಶ್ಯವನ್ನು ರಿಹರ್ಸಲ್ ಮಾಡುತ್ತಿದ್ದೆವು. ಡ್ಯಾನ್ಸ್ ವಿಷಯದಲ್ಲಿ ನಾನು ಎರಡು ಬಾರಿ ರಿಹರ್ಸಲ್ ಮಾಡಿದರೆ ಶ್ರೇಯಸ್ 5 ಬಾರಿ ಮಾಡುತ್ತಿದ್ದರು. ಪ್ಯಾಕಪ್ ಆಗಿ ಮನೆಗೆ ಹೋದರೂ ಶ್ರೇಯಸ್ ಸೆಟ್ಟಿನಲ್ಲೇ ಇದ್ದುಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದರು ಎನ್ನುವ ರೀಷ್ಮಾ ನಾಣಯ್ಯ ಹೀರೋಗೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರ ನವೆಂಬರ್ 11ರಂದು ರಿಲೀಸ್ ಆಗುತ್ತಿದೆ.