ದಿನ ದಿನಕ್ಕೂ ಕಾಂತಾರ ಕ್ರೇಜ್ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಕ್ರೇಜ್‍ನ್ನು ರಿಲೀಸ್ ಆದ 4 ವಾರದ ನಂತರವೂ ಉಳಿಸಿಕೊಂಡ ಇನ್ನೊಂದು ಚಿತ್ರ ಇಲ್ಲ. ಈಗಾಗಲೇ ಚಿತ್ರ ನೋಡಿದವರ ಸಂಖ್ಯೆಯಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮೀರಿ ಮುನ್ನುಗ್ಗುತ್ತಿರುವ ಚಿತ್ರ ಕಾಂತಾರ. ಇನ್ನು ಕೆಲವೇ ದಿನಗಳಲ್ಲಿ 1 ಕೋಟಿ ಪ್ರೇಕ್ಷಕರ ಸಂಖ್ಯೆ ಗಡಿ ದಾಟಲಿದೆ. ಹೊಂಬಾಳೆ, ರಿಷಬ್ ಶೆಟ್ಟಿ ಇಬ್ಬರೂ ದಾಖಲೆಗಳ ಸರದಾರರಾಗುತ್ತಿದ್ದಾರೆ.
ಕಾಂತಾರ ಕನ್ನಡದಲ್ಲಿಯೇ 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದೂ ಕೂಡಾ ಕರ್ನಾಟಕದಲ್ಲಿಯೇ ಎನ್ನವುದು ವಿಶೇಷ. ವಿಶ್ವದಾದ್ಯಂತ ಸೇರಿ 150 ಕೋಟಿ ದಾಟಿದೆ ಎನ್ನುವುದು ಒಂದು ಅಂದಾಜು.
ಹಿಂದಿಯಲ್ಲಿ ವಿಶ್ವದಾದ್ಯಂತ 27 ಕೋಟಿ ಕಲೆಕ್ಷನ್ ಮಾಡಿದ್ದು ದಿನೇ ದಿನೇ ಕಲೆಕ್ಷನ್ ಏರುತ್ತಲೇ ಇದೆ. ವಿಶೇಷವೆಂದರೆ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ ಈ ಕಲೆಕ್ಷನ್ ಒಂದು ದಾಖಲೆಯೇ. ಡಬ್ ಆದ ಸಿನಿಮಾವೊಂದು ಪ್ರತಿ ದಿನವೂ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ದಾಖಲೆ. ಹಿಂದಿಯಲ್ಲೇ 50 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ.
ಕನ್ನಡ ಮತ್ತು ಹಿಂದಿ ಬಿಟ್ಟರೆ ಅತಿ ಹೆಚ್ಚು ಕಲೆಕ್ಷನ್ ಆಗಿರುವುದು ತೆಲುಗಿನಲ್ಲಿ. ತೆಲುಗಿನಲ್ಲಿ 25 ಕೋಟಿ ದಾಟಿದೆ ಕಾಂತಾರ ಕಲೆಕ್ಷನ್.
ತಮಿಳು ಹಾಗೂ ಮಲಯಾಳಂ ಬಾಕ್ಸಾಫೀಸಿನಲ್ಲೂ ಇತಿಹಾಸ ಬರೆಯುತ್ತಿದೆ. ಆದರೆ ಪಕ್ಕಾ ಲೆಕ್ಕ ಸಿಕ್ಕಿಲ್ಲ.
ಅಮೆರಿಕದಲ್ಲಿ 1 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಕೆಜಿಎಫ್ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ತಮಿಳು ವರ್ಷನ್ ಇವತ್ತು ರಿಲೀಸ್ ಆಗುತ್ತಿದೆ.