ಮನುಷ್ಯರಿಗೆ ಕೋಪ ಬಂದಾಗ್ಲೇ ರಾಕ್ಷಸ ಆಗೋದು. ಅಂತದ್ರಲ್ಲಿ ಆ ಸೂರ್ಯ ಮೊದಲೇ ರಾಕ್ಷಸ ಎನ್ನುತ್ತಾನೆ ಗೆಳೆಯ. ರಾಣಾ ಅಪ್ಪಟ ರಾಕ್ಷಸನಂತೆ ಸಿಕ್ಕ ಸಿಕ್ಕವರನ್ನೆಲ್ಲ ಹೊಡೆದು ಹಾಕುತ್ತಾನೆ. ಹಿಂಸಾತ್ಮಕವಾಗಿ.
ನಾವು ಹೆಂಡ್ತಿ, ಫ್ರೆಂಡ್ಸು ಅಂಥಾ ಬದುಕ್ತಾ ಇರ್ತೀವಿ. ಅವನ್ನೆಲ್ಲ ನಿಮ್ಮಂತೋರ ಮೇಲೆ ಫೋಕಸ್ ಮಾಡಿದ್ರೆ.. ಆರ್ಭಟಿಸಿ ಬಂದು ಅಟ್ಟಾಡಿಸುತ್ತಾನೆ ಸೂರ್ಯ.
ನೀನು ಪೊಲೀಸ್ ಕೆಲಸಕ್ಕೆ ಸೇರೋಕ್ ಮುಂಚೇನೇ ಹಿಂಗೆ. ಇನ್ನು ಸೇರಿದ್ಮೇಲೆ.. ಎನ್ನುತ್ತಾಳೆ ನಾಯಕಿ.
ರಾಣಾ ಚಿತ್ರದ ಟ್ರೇಲರಿನಲ್ಲಿ ರೌಡಿಸಂ ಇದೆ. ಆದರೆ ಟ್ರೇಲರ್ ಮುಗಿಯೋ ಹೊತ್ತಿಗೆ ಹೀರೋ ರೌಡಿ ಅಲ್ಲ ಪೊಲೀಸ್ ಎನ್ನುವುದು ಅರ್ಥವಾಗುತ್ತೆ. ಹಾಗಾದರೆ.. ಆತನೇಕೆ ಅಷ್ಟು ಕುದಿಯುತ್ತಿರುತ್ತಾನೆ..
ರಾಣಾ ಚಿತ್ರದ ಟ್ರೇಲರಿನ ಸಕ್ಸಸ್ ಇರೋದೇ ಅಲ್ಲಿ. ಅಷ್ಟು ಕುತೂಹಲ ಹುಟ್ಟಿಸುತ್ತಾರೆ ನಂದಕಿಶೋರ್. ಶ್ರೇಯಸ್ ಮಂಜು ರೋಮಾಂಚನ ಹುಟ್ಟಿಸುತ್ತಾರೆ. ರೀಷ್ಮಾ ನಾಣಯ್ಯ ಮುದ್ದು ಮುದ್ದಾಗಿ ಮಾತ್ರ ಅಲ್ಲ, ಬೇರೆಯದೇ ರೋಲ್ ಇದೆ ಅನ್ನೋದು ಗೊತ್ತಾಗುತ್ತೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣಾ ರಿಲೀಸ್ ಆಗುವುದು ನವೆಂಬರ್ 11ಕ್ಕೆ.
ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಾಯಕ-ನಾಯಕಿ. ಮ್ಯೂಸಿಕ್ಕು ಚಂದನ್ ಶೆಟ್ಟಿಯವರದ್ದು. ಸಂಯುಕ್ತಾ ಹೆಗ್ಡೆ ಸ್ಪೆಷಲ್ ಸಾಂಗ್‍ನಲ್ಲಿ ಹಾಡಿ ಕುಣಿದಿದ್ದಾರೆ. ಈಗಾಗಲೇ ಗಲ್ಲಿ ಬಾಯ್ಸ್, ಉಧೋಉಧೋ ಹುಲಿಗೆಮ್ಮ, ಮಳ್ಳಿ ಮಳ್ಳಿ ಹಾಡುಗಳು ಹಿಟ್ ಆಗಿವೆ.