ಕಾಂತಾರ. ಕನ್ನಡಿಗರೆಲ್ಲರೂ ಎದೆಗೆ ಅಪ್ಪಿಕೊಂಡು ಪ್ರೀತಿಸುತ್ತಿರುವ ಸಿನಿಮಾ. ರಿಷಬ್ ಶೆಟ್ಟಿ ಚಿತ್ರದ ಮೂಲಕ ತಾವೂ ಬೇರೆಯ ಎತ್ತರಕ್ಕೆ ಹೋದರು. ಚಿತ್ರರಂಗವನ್ನೂ ಎತ್ತಿಕೊಂಡು ಹೋದರು. ಈಗ 100 ಕೋಟಿ ಕ್ಲಬ್ ಸನಿಹ ಬಂದಿದೆ.
ಉ.ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಕಾಂತಾರ. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್, ವಿಕ್ರಾಂತ್ ರೋಣ ಸೇರಿದಂತೆ ಹಲವು ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿವೆ. ಆದರೆ ಕೇವಲ ಕನ್ನಡದಲ್ಲಿ ಮಾತ್ರವೇ ರಿಲೀಸ್ ಆಗಿ ದಾಖಲೆ ಮಾಡಿದ್ದು ಕಾಂತಾರ.
ತಮಿಳುನಾಡು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಕಾಂತಾರ. ಕಲೆಕ್ಷನ್‍ನಲ್ಲೂ ನಂ.1 . ಮುಂಬೈನಲ್ಲಿ 100ಕ್ಕೂ ಹೆಚ್ಚು ಶೋ ಕಂಡ ಮೊದಲ ಕನ್ನಡ ಸಿನಿಮಾ ಕಾಂತಾರ.
ಅಮೆರಿಕ, ಕೆನಡಾ, ಬ್ರಿಟನ್, ಅರಬ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ಕಲೆಕ್ಷನ್ ಮಾಡಿದ್ದು ದಾಖಲೆ
100 ಕೋಟಿ ಕ್ಲಬ್ ಸೇರುವುದು ಖಚಿತ. ಅಧಿಕೃತ ಮಾಹಿತಿ ಬಂದಿಲ್ಲವಾದರೂ 100 ಕೋಟಿಗೆ ಹತ್ತಿರದಲ್ಲಿದೆ ಎಂಬ ಸುದ್ದಿಯಂತೂ ಇದೆ.
ರಿಷಬ್ ಶೆಟ್ಟಿಯವರ ಕಿರಿಕ್ ಪಾರ್ಟಿ ಚಿತ್ರದ ಜೀವಮಾನದ ಗಳಿಕೆಯನ್ನು ಈಗಾಗಲೇ ಕಾಂತಾರ ಹಿಂದೆ ಹಾಕಿದೆ. ವಿಕ್ರಾಂತ್ ರೋಣ, ಮಿಸ್ಟರ್ & ಮಿಸೆಸ್ ರಾಮಾಚಾರಿ, ರಾಜಕುಮಾರ, ಚಾರ್ಲಿ 777 ಚಿತ್ರದ ದಾಖಲೆಯನ್ನೂ ಹಿಂದೆ ಹಾಕಿದೆ.
ಬುಕ್ ಮೈ ಶೋನಲ್ಲಿ ಚಿತ್ರವನ್ನು ಮೆಚ್ಚಿದವರ ಸಂಖ್ಯೆ 99%ಗೂ ಹೆಚ್ಚು. ವೋಟಿಂಗ್ ಮಾಡಿದವರ ಸಂಖ್ಯೆ ಕೂಡಾ ಅಷ್ಟೆ. 30 ಸಾವಿರಕ್ಕೂ ಹೆಚ್ಚು. ಇದೂ ದಾಖಲೆಯೇ.
ಈಗ ಹಿಂದಿಯಲ್ಲಿ ಅಕ್ಟೋಬರ್ 17ಕ್ಕೆ ರಿಲೀಸ್ ಆಗುತ್ತಿದೆ. ಹಿಂದಿ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ತೆಲುಗಿನಲ್ಲಿ ಅಕ್ಟೋಬರ್ 15ಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗಿನ ಟ್ರೇಲರ್‍ಗೂ ಉತ್ತಮ ರಿಯಾಕ್ಷನ್ ಸಿಕ್ಕಿದೆ.
ದಂತಕತೆಯ ಸಕ್ಸಸ್ ಸ್ಟೋರಿಗೆ ಕೊಟ್ಟಿರುವ ಹೆಸರು ಡಿವೈನ್ ಹಿಟ್ ಎನ್ನುವುದು. ಅಫ್‍ಕೋರ್ಸ್.. ಇದು ಖಂಡಿತ ದೈವೀಕ ಯಶಸ್ಸು.