ಕನ್ನಡ ಚಿತ್ರರಂಗದಲ್ಲೀಗ ಸಂಭ್ರಮ. ದಸರೆಗೂ ಮುಂಚೆ ಬಂದ ಗುರು ಶಿಷ್ಯರು ಸೂಪರ್ ಹಿಟ್. ಶರಣ್-ನಿಶ್ವಿಕಾ ಜೋಡಿಯ ಖೋಖೋ ಆಟದ ಹಿನ್ನೆಲೆಯಲ್ಲಿ ಮೂಡಿ ಬಂದ ಸಿನಿಮಾ ಗುರು ಶಿಷ್ಯರು. ಜಡೇಶ್ ಕುಮಾರ್ ಹಂಪಿ ಭರವಸೆಯ ನಿರ್ದೇಶಕ ಅನ್ನೋದನ್ನ ಸಾಬೀತು ಮಾಡಿದರು. ಕಾಮಿಡಿ ಟ್ರ್ಯಾಕ್ ಜೊತೆ ಜೊತೆಗೇ ಸಾಗಿದ ಖೋಖೋ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತು. ಸಿನಿಮಾ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ಭರ್ಜರಿ 3ನೇ ವಾರಕ್ಕೆ ಹೆಜ್ಜೆಯಿಟ್ಟಿದ್ದಾರೆ ಗುರು ಶಿಷ್ಯರು.
ಮತ್ತೊಂದೆಡೆ ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಕಾಂತಾರ. 2ನೇ ವಾರಕ್ಕೆ ಕಾಲಿಟ್ಟಿದೆ. ಕಿರಿಕ್ ಪಾರ್ಟಿ ಸಿನಿಮಾ ಇಡೀ ಜರ್ನಿಯಲ್ಲಿ ಗಳಿಸಿದ್ದ ಹಣವನ್ನೆಲ್ಲ ಕಾಂತಾರಾ ಮೂರು ದಿನಗಳಲ್ಲೇ ಗಳಿಸಿದೆ. ಈಗಲೂ ಹೌಸ್ ಹೌಸ್ ಫುಲ್. ರಿಷಬ್ ಶೆಟ್ಟಿಗೆ ಹೋದಲ್ಲಿ ಬಂದಲ್ಲಿ ದೈವ ನಮಸ್ಕಾರ ಸಿಗುತ್ತಿದೆ. ಅದು ಅವರಿಗಲ್ಲ, ಅವರೊಳಗಿನ ದೈವಕ್ಕೆ. ಸಪ್ತಮಿ ಗೌಡ ರೋಮಾಂಚನ ಹುಟ್ಟಿಸಿದ್ದಾರೆ. ಹೊಂಬಾಳೆ ಈಗ ಸಿನಿಮಾವನ್ನು ಬೇರೆ ಭಾಷೆಯಲ್ಲೂ ತರೋಕೆ ಮುಂದಾಗಿದ್ದು ಅಕ್ಟೋಬರ್ 9ರಂದು ಹಿಂದಿಯ ಟ್ರೇಲರ್ ರಿಲೀಸ್ ಆಗಲಿದೆ. ಶೀಘ್ರದಲ್ಲೆ ಇತರೆ ಭಾಷೆಗಳಿಗೂ ಡಬ್ ಆಗಲಿದೆ.