RRR. ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಇಂಡಿಯನ್ ಸಿನಿಮಾ. ಸ್ವಾತಂತ್ರ್ಯ ಹೋರಾಟಗಾರರ ಕಥೆಗೆ ರೋಚಕತೆಯ ಕಲ್ಪನೆ ಬೆರೆಸಿ ಪ್ರೇಕ್ಷಕರಿಗೆ ರೋಮಾಂಚನ ನೀಡಿದ್ದ ಸಿನಿಮಾ. ಆಸ್ಕರ್ ಪ್ರಶಸ್ತಿಗೆ ಹೋಗಲಿದೆ ಎಂದು ನಿರೀಕ್ಷಿಸಿದ್ದ ಸಿನಿಮಾವನ್ನ ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ. ಬದಲಿಗೆ ಗುಜರಾತಿ ಚಿತ್ರವೊಂದಕ್ಕೆ ಪಟ್ಟ ಸಿಕ್ಕಿತ್ತು. ಈಗ RRR ಸ್ವತಃ ತಾನೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದೆ.
ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು. ಆ ಸ್ಪರ್ಧೆಯಲ್ಲಿ 14 ವಿಭಾಗಗಳಲ್ಲಿ ಆರ್.ಆರ್.ಆರ್. ರೇಸ್‍ಗೆ ಬಿದ್ದಿದೆ.
ಅತ್ಯುತ್ತಮ ನಿರ್ದೇಶಕ : ರಾಜಮೌಳಿ
ಅತ್ಯುತ್ತಮ ನಟ : ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜ
ಪೋಷಕ ನಟ : ಅಜಯ್ ದೇವಗನ್
ಪೋಷಕ ನಟಿ : ಅಲಿಯಾ ಭಟ್
ಬೆಸ್ಟ್ ವೊರಿಜಿನಲ್ ಸಾಂಗ್ : ನಾಟ್ಟು ನಾಟ್ಟು
ಕ್ಯಾಮೆರಾ : ಸೆಂಥಿಲ್ ಕುಮಾರ್
ಸಂಕಲನ : ಶ್ರೀಕರ್ ಪ್ರಸಾದ್
ಕಾಸ್ಟ್ಯೂಮ್ ಡಿಸೈನರ್ : ರಮಾ ರಾಜಮೌಳಿ
ಚಿತ್ರಕಥೆ : ಬೆಸ್ಟ್ ಸೌಂಡಿಂಗ್ : ಮೇಕಪ್ : ಪ್ರೊಡಕ್ಷನ್ : ಗ್ರಾಫಿಕ್ಸ್.. ಹೀಗೆ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧಿಸಿದೆ ಆರ್.ಆರ್.ಆರ್.