ಸಾವಿರ ದೈವದ ಮನ ಸಂಪ್ರೀತ ಬೇಡುತ ನಿಂದೆವು ಆರಾಧಿಸುತ...
ಸ್ಯಾಂಡಲ್ವುಡ್ನಲ್ಲಿ ಕೋಟಿಗಳ ಮಿಂಚು ಹರಿಯುತ್ತಿದೆ. ಇದು ಪಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿಯೇ ಬಿಡುಗಡೆಗೊಂಡು ದಾಖಲೆ ಬರೆಯುತ್ತಿರುವ ಸಿನಿಮಾ. ನಮ್ಮ ನೆಲದ ಒಂದು ಸಂಸ್ಕತಿಯ ಅದ್ಭುತ ಕಥೆಯ ಡಿವೈನ್ ಬ್ಲ್ಯಾಕ್ ಬಾಸ್ಟರ್ ಹಿಟ್. ಸಿನಿಮಾ ರಿಲೀಸ್ ಆಗಿ ಆರೇ ದಿನದಲ್ಲಿ 50 ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿದೆ.
ರಾಜಕುಮಾರ, ಯುವರತ್ನ, ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಸಂಸ್ಥೆಯ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತಿದೆ ಕಾಂತಾರ. ಸಿನಿಮಾ ಸಕ್ಸಸ್ ಯಾತ್ರೆ ನಡೆಸುತ್ತಿರುವ ಕಾಂತಾರ ಮ್ಯಾಜಿಕ್ ಮಾಡಿದೆ. ಬುಕ್ ಮೈ ಶೋನಲ್ಲೇ 22 ಸಾವಿರಕ್ಕೂ ಹೆಚ್ಚು ಜನ ಚಿತ್ರ ವಿಮರ್ಶೆ ಮಾಡಿದ್ದು ಶೇ.99 ಅಂಕ ಕೊಟ್ಟಿದ್ದಾರೆ. ವೀರೇಶ್ ಚಿತ್ರಮಂದಿರದಲ್ಲಿ ಮೊದಲ ವಾರದ ಎಲ್ಲ ಶೋಗಳೂ ಹೌಸ್ ಫುಲ್ ಎನ್ನುವುದು ಒಂದು ದಾಖಲೆ.
ಕೆಜಿಎಫ್ ಕನ್ನಡದಲ್ಲಿ ಹೇಗೆ ಕಲೆಕ್ಷನ್ ಮಾಡಿತ್ತೋ ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿರೋ ಕಾಂತಾರ 10 ದಿನದಲ್ಲಿ 100 ಕೋಟಿ ಕ್ಲಬ್ ಸೇರೋ ಚಾನ್ಸ್ ಹೆಚ್ಚಿದೆ.
ಕಾಂತಾರ ರಿಷಬ್ ಶೆಟ್ಟಿ ಸಿನಿ ಕೆರಿಯರ್ನಲ್ಲೇ ಮೈಲುಗಲ್ಲಾಗಲಿದೆ. ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ದೈವವೊಂದು ಆರ್ಭಟಿಸುತ್ತಾ ಕುಣಿಯುತ್ತಿದೆ. ಆಯುಧಪೂಜೆ, ವಿಜಯದಶಮಿ ನಡುವೆಯೂ ಜನಜಂಗುಳಿ ಥಿಯೇಟರ್ ಮುಂದಿದೆ. ದಸರಾ ಹಬ್ಬದ ಸಾಲು ಸಾಲು ರಜೆಯನ್ನ ಕಾಂತಾರದ ಡಿವೈನ್ ಲೋಕಕ್ಕೆ ಹೋಗಿ ಪ್ರೇಕ್ಷಕರು ಮಜಾ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರುಗೆ ಬಂಪರ್ ಜಾಕ್ ಪಾಟ್. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಎಲ್ಲರಿಗೂ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ.