ಯಾವುದೇ ಕನ್ನಡ ಸಿನಿಮಾ ಆಗಲಿ. ಕನಾಟಕದಲ್ಲಿ ಗೆಲ್ಲಲಿ. ಕಾಂತಾರ ನಿಜಕ್ಕೂ ಚೆನ್ನಾಗಿದೆ. ಆದರೆ ಆ ಅಲೆಯಲ್ಲಿ ಇನ್ನೊಂದು ಚಿತ್ರ ಸೋಲಬಾರದು. ಸಾಮಾಜಿಕ ಸಾಮರಸ್ಯ ಸಾರುವ ಸಹಬಾಳ್ವೆ ಬಯಸುವ ಸಂದೇಶದ ಚಿತ್ರ ಸೋಲಬಾರದು ಎಂದು ಬಯಸಿದ್ದಾರೆ ಜಗ್ಗೇಶ್. ರಾಯರ ಭಕ್ತರಾಗಿರುವ ಜಗ್ಗೇಶ್ ಅದಕ್ಕೊಂದು ಚೆಂದದ ಕಥೆಯನ್ನೂ ಹೇಳಿದ್ದಾರೆ.
ಸಿನಿಮಾದಲ್ಲೊಂದು ದೃಶ್ಯವಿದೆ. ರಾಯರ ಮಠದಲ್ಲಿ ವೀಣೆ ನುಡಿಸುವ ಮುಸ್ಲಿಂ ಹೆಣ್ಣು ಮಗಳನ್ನು ಮಠದ ಅರ್ಚಕರು, ಭಕ್ತರು ನಿಂದಿಸುತ್ತಾರೆ. ಆದರೆ ಆಕೆಯ ಮನೆಗೆ ಸ್ವತಃ ರಾಯರ ಬೃಂದಾವನವೇ ಬರುತ್ತದೆ. ಅದೂ.. ಮಠದ ಸ್ವಾಮಿಗಳಿಂದ. ಶಕೀಲಾ ಬಾನುಗೆ ಸ್ವಾಮಿಗಳು ನಾನು ಬೃಂದಾವನದಲ್ಲಿ ರಾಯರನ್ನು ಕಾಣುತ್ತೇನೆ. ಕೆಲವರು ಅಲ್ಲಾನನ್ನ. ಕೆಲವರು ಜೀಸಸ್‍ನನ್ನ ಕಾಣ್ತಾರೆ. ಬೃಂದಾವನ ಅನ್ನೋದು ತಿಳಿ ಮನಸ್ಸಿನಂತೆ. ನೀನು ಜೀವ ಇರುವವರೆಗೆ ವೀಣೆ ನುಡಿಸು. ಗುಡಿ, ಮಸೀದಿ, ಚರ್ಚ್ ಎಲ್ಲ ಕಡೆ ವೀಣೆ ನುಡಿಸು ಅನ್ನೋ ಮಾತನ್ನ ಸ್ವಾಮಿಗಳು ಹೇಳುತ್ತಾರೆ.
ಈ ದೃಶ್ಯವನ್ನ ಈಗ ಚಿತ್ರತಂಡ ರಿವೀಲ್ ಮಾಡಿದೆ. ವಿಜಯ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಈ ಸಂದೇಶಗಳೇ ಪ್ರೇಕ್ಷಕರಿಗೆ ಇಷ್ಟವಾಗಿವೆ. ಜಗ್ಗೇಶ್-ಆದಿತಿ ಪ್ರಭುದೇವ, ಡಾಲಿ ಧನಂಜಯ-ಸುಮನ್ ರಂಗನಾಥ್, ಹೇಮಾ ದತ್, ದತ್ತಣ್ಣ ಮೊದಲಾದ ಪ್ರತಿಭೆಗಳ ಸಮ್ಮಿಲನ ಈ ತೋತಾಪುರಿ.