ಸೆಂಚುರಿ ಸ್ಟಾರ್ ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಕೊನೆಗೆ ಕ್ರಿಸ್ ಮಸ್ ಹಬ್ಬದ ಸಂಭ್ರಮಕ್ಕೆ ವೇದ ತೆರೆ ಕಾಣುತ್ತಿದೆ. ಇದು ಹರ್ಷ-ಶಿವಣ್ಣ ಕಾಂಬಿನೇಷನ್ನಿನ 4ನೇ ಸಿನಿಮಾ. ಭಜರಂಗಿ, ಭಜರಂಗಿ 2, ವಜ್ರಕಾಯ ನಂತರ ಜೋಡಿ ಮತ್ತೊಮ್ಮೆ ಒಂದಾಗಿದೆ.
ಗೀತಾ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರವೂ ವೇದ. ಗಾನವಿ ನಾಯಕಿಯಾಗಿದ್ದು ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಶಿವಣ್ಣನ ಮಗಳಾಗಿ ನಟಿಸಿದ್ದಾರೆ. 1960ರ ಕಾಲದ ಕಥಾ ಹಂದರ ಚಿತ್ರದಲ್ಲಿದ್ದು, ಉಮಾಶ್ರೀ, ಕುರಿ ಪ್ರತಾಪ್ ಮೊದಲಾದವರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತವಿದೆ.