ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಸ್ನೇಹಿತ್ ಮತ್ತು ಸಹಚರು ಜಾಗ್ವಾರ್ ಕಾರಿನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಕಾರಿನವರಿಗೆ ಅವಾಜ್ ಹಾಕಿದ್ದಾರೆ. . ಪತಿ ಎದುರೇ ಅನ್ನಪೂರ್ಣ ಅವರಿಗೆ ಸೀರೆ ಬಿಚ್ಚಿ ಹೊಡಿತಿನಿ ,ರೇಪ್ ಮಾಡ್ತಿನಿ ಎಂದು ಅವಾಜ್ ಹಾಕಿದ್ದಾನೆ. ಸ್ನೇಹಿತ್ ವರ್ತನೆಯಿಂದ ಹೆದರಿದ ದಂಪತಿ ಮಹಾಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ನೇಹಿತ್ ವಿರುದ್ಧ ಅನ್ನಪೂರ್ಣ ದಂಪತಿ ಈ ಹಿಂದೆಯೂ ದೂರು ನೀಡಿದ್ದರು.. ಈ ಹಿಂದೆ ಮಾಡಿಕೊಂಡಿದ್ದ ಕಿರಿಕ್ಗೆ ಖ್ಯಾತ ನಿರ್ಮಾಪಕರೊಬ್ಬರ ಮಧ್ಯಸ್ಥಿಕೆಯಲ್ಲಿ ಕೇಸ್ ಸಾಲ್ವ್ ಆಗಿತ್ತು.
ಮಗ ಏನೇ ತಪ್ಪು ಮಾಡಿದ್ದರೂ ತಂದೆ ಕ್ಯಾರೆ ಅನ್ನುವುದಿಲ್ಲ ತಿದ್ದುವುದಿಲ್ಲ. ಸಹಚರರೊಂದಿಗೆ ಮನೆವರೆಗೂ ದಂಪತಿಗಳನ್ನು ಫಾಲೋ ಮಾಡಿ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ನನ್ನ ಮಗ ಹಾಗಿಲ್ಲ. ಒಳ್ಳೆಯವನು ಎನ್ನುವುದು ಸೌಂದರ್ಯ ಜಗದೀಶ್ ಸಮರ್ಥನೆ. ಅನ್ನಪೂರ್ಣ ದೂರಿಗೆ ಪ್ರತಿಯಾಗಿ ಸೌಂದರ್ಯ ಜಗದೀಶ್ ಕಾರ್ ಡ್ರೈವರ್ ಜಾತಿ ನಿಂದನೆ ಕೇಸು ಹಾಕಿದ್ದಾರೆ.
ಯಾರಿದು ಸ್ನೇಹಿತ್ ?
ಜಗದೀಶ್ ಪುತ್ರ ಸ್ನೇಹಿತ್ ಅಪ್ಪು ಪಪ್ಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ. ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆಯೂ ಅನ್ನಪೂರ್ಣ ಮತ್ತು ಸ್ನೇಹಿತ್ ಗಲಾಟೆ ತಾರಕಕ್ಕೇರಿತ್ತು. ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಖ್ಯಾತ ನಿರ್ಮಾಪಕರೊಬ್ಬರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದಿತ್ತು. ಈಗ ಮತ್ತೊಮ್ಮೆ ಸ್ನೇಹಿತ್ ವಿರುದ್ಧ ದೂರು ದಾಖಲಾಗಿದೆ.