` ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್
Totapuri Movie Image

ವಿಜಯ್ ಪ್ರಸಾದ್ ಅವರ ಕಥೆಗಳು ಮತ್ತು ಆಲೋಚನೆಗಳೇ ವಿಭಿನ್ನ. ಕೆಲವು ವಿಚಾರಗಳ ಬಗ್ಗೆ ಒಳಗೊಳಗೇ ಯೋಚಿಸುವ ಜನ ಅದನ್ನು ಗಟ್ಟಿಯಾಗಿ ಮಾತನಾಡಲು ಹೆದರುತ್ತಾರೆ. ಆದರೆ ವಿಜಯ ಪ್ರಸಾದ್ ಅದನ್ನು ಹಾಸ್ಯದ ಮೂಲಕ ಹೇಳುತ್ತಾರೆ. ಡಬಲ್ ಮೀನಿಂಗ್ ಹಾಸ್ಯವಿದ್ದರೂ ಅಲ್ಲೊಂದು ಸಂದೇಶವಂತೂ ಇರುತ್ತೆ.

ಇದು ಸುಮನ್ ರಂಗನಾಥ್ ಮಾತು. ತೋತಾಪುರಿ ಚಿತ್ರದಲ್ಲಿ ಅವರು ಕ್ರೈಸ್ತ ಸನ್ಯಾಸಿನಿ ವಿಕ್ಟೋರಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ವಿಜಯ್ ಪ್ರಸಾದ್ ಜೊತೆ  ಸಿದ್ಲಿಂಗು, ನೀರ್ ದೋಸೆ, ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ನಟಿಸಿರುವ ಸುಮನ್ ಅವರಿಗೆ ವಿಜಯ್ ಪ್ರಸಾದ್ ಇಷ್ಟವಾಗುವ ನಿರ್ದೇಶಕ.

ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪಾತ್ರಗಳಿವೆ. ಆದರೆ ವಿವಾದಾತ್ಮಕ ದೃಶ್ಯಗಳಿಲ್ಲ. ಸಂಭಾಷಣೆಗಳ ಮೂಲಕವೇ ಭಾವನೆ ಹೇಳಿದ್ದೇವೆ. ಸಾಮರಸ್ಯದಿಂದ ಬದುಕುವುದು ಹೇಗೆ ಅನ್ನೋ ಕಥೆಯೂ ಚಿತ್ರದಲ್ಲಿದೆ.ವಾಸ್ತವ ಮುಂದಿಡೋಕೆ ನಿರ್ದೇಶಕರಿಗೆ ಯಾವುದೇ ಭಯವಿಲ್ಲ. ಇನ್ನು ನನ್ನ ಪಾತ್ರದ ಜೊತೆಗಾರ ಡಾಲಿ ಧನಂಜಯ್ ಅವರ ಪಾತ್ರದ ಮೂಲಕ ಶಾಶ್ವತ ಪ್ರೀತಿಯನ್ನು ನೋಡುತ್ತೇವೆ ಎನ್ನುವುದು ಸುಮನ್ ಮಾತು.

ಜಗ್ಗೇಶ್, ಆದಿತಿ ಪ್ರಭುದೇವ ನಟಿಸಿರುವ ಚಿತ್ರ ತೋತಾಪುರಿ ಭಾಗ 1 ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ.