ಗುರು ಶಿಷ್ಯರು ಚೆನ್ನಾಗಿದೆ.
ಶರಣ್-ನಿಶ್ವಿಕಾ ನಾಯ್ಡು ಅಭಿನಯ ಬೊಂಬಾಟ್.
ಖೋಖೋ ಆಟದ ಗಮತ್ತಂತೂ ಸಖತ್ತಾಗಿದೆ. 12 ಹುಡುಗರೂ ಅಷ್ಟೇ ಜೋಶ್‍ನಲ್ಲಿ ನಟಿಸಿದ್ದಾರೆ.
ಕನ್ನಡಿಗರು ಚಿತ್ರವನ್ನು ಬಾಚಿ ಅಪ್ಪಿಕೊಂಡಿದ್ದಾರೆ. ಕಲೆಕ್ಷನ್ ಕೂಡಾ ಭರ್ಜರಿಯಾಗಿಯೇ ಇದೆ.
ಆದರೆ..
ತಮಿಳು ಚಿತ್ರದ ಎದುರು ಶರಣಾಗುವ ಪರಿಸ್ಥಿತಿ ಬಂತಾ? ಬುಕ್ ಮೈ ಶೋನಲ್ಲಿ ನರ್ತಕಿ ಥಿಯೇಟರಲ್ಲಿ ಹಾಗೂ ಗುರು ಶಿಷ್ಯರು ಪ್ರದರ್ಶನವಾಗುತ್ತಿರುವ ಹಲವು ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾ ಪೊನ್ನಿಯನ್ ಸೆಲ್ವನ್ ರೀಪ್ಲೇಸ್ ಆಗಿದೆ. ಗುರು ಶಿಷ್ಯರು ಇಲ್ಲಿನ ಮಣ್ಣಿನ ಸೊಗಡಿನ ಸಿನಿಮಾ. ಸ್ಪೋಟ್ರ್ಸ್ ಸಿನಿಮಾ. ಪೊನ್ನಿಯನ್ ಸೆಲ್ವನ್ ತಮಿಳು ಚಿತ್ರ. ಆದರೆ.. ಆ ಚಿತ್ರ ಕನ್ನಡದ ಚಿತ್ರಕ್ಕೂ ಎತ್ತಂಗಡಿ ಮಾಡಿದೆ.
ಪೊನ್ನಿಯನ್ ಸೆಲ್ವನ್ ಮಣಿರತ್ನಂ ನಿರ್ದೇಶನದ ಸಿನಿಮಾ. ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ವಿಕ್ರಂ, ಜಯಂ ರವಿ, ಕಿಶೋರ್.. ಹೀಗೆ ಘಟಾನುಘಟಿಗಳೇ ಇರುವ ಸಿನಿಮಾ. ಎ.ಆರ್.ರೆಹಮಾನ್ ಮ್ಯೂಸಿಕ್ಕೂ ಇದೆ. ಪ್ಯಾನ್ ಇಂಡಿಯಾ ಸಿನಿಮಾ. ಆದರೆ.. ಚಿತ್ರವನ್ನು ಕನ್ನಡದಲ್ಲಿ ಕೇವಲ 2 ಶೋಗಳಿಗೆ ಸೀಮಿತಗೊಳಿಸಲಾಗಿದೆ. ತೆಲುಗು ಹಾಗೂ ಮಲಯಾಳಂ ವರ್ಷನ್‍ಗಳೂ ಅಷ್ಟೆ. ತಮಿಳು ವರ್ಷನ್ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.
ಅವರು ಎಲ್ಲಾದರೂ ಮಾಡಿಕೊಳ್ಳಲಿ.. ಆದರೆ.. ಒಳ್ಳೆಯ ಕಲೆಕ್ಷನ್ ಮತ್ತು ಪ್ರೇಕ್ಷಕರು ಹಾಗೂ ವಿಮರ್ಶಕ ಮೆಚ್ಚುಗೆ ಇರುವ ಗುರು ಶಿಷ್ಯರಿಗೇಕೆ ಖೋ ಕೊಡಬೇಕು ಎನ್ನುವುದು ಕನ್ನಡಿಗರ ಪ್ರಶ್ನೆ.