ರಾಣಾ ಚಿತ್ರದ ಗಲ್ಲಿಭಾಯ್ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ. ಹಾಡಿನಲ್ಲಿ ಮೈಮನ ಬಿಚ್ಚಿ ಹಾಡಿ ಕುಣಿದಿರುವ ಜೋಡಿ ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ.. ತುಟಿಗೆ ತುಟಿ ಒತ್ತಿರುವುದು ವಿಶೇಷ. ಚಂದನ್ ಶೆಟ್ಟಿ ಹಾಡಿನ ಸಾಲುಗಳೇ ಹಾಗಿವೆ. ಮ್ಯೂಸಿಕ್ ಕೂಡಾ ಚಂದನ್ ಶೆಟ್ಟಿ ಅವರದ್ದೇ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿದು.
ನಂದ ಕಿಶೋರ್ ನಿರ್ದೇಶನದ ರಾಣಾ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ನಾಯಕ. ಗಲ್ಲಿಭಾಯ್ ಹಾಡನ್ನು ರಿಲೀಸ್ ಮಾಡಿದ್ದು ಜೋಗಿ ಪ್ರೇಮ್.
ಸಿನಿಮಾದ ಹಾಡು, ಮೇಕಿಂಗ್ ನೋಡಿ ಖುಷಿಯಾಯ್ತು. ನಾಯಕ, ನಾಯಕಿ ಇಬ್ಬರೂ ಅದ್ಭುತವಾಗಿ ಕುಣಿದಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ ಎಂದು ಹಾರೈಸಿದರು ಪ್ರೇಮ್.