` ಲವ್ 360 ಲಾಸ್ ಆಗಲಿಲ್ಲ... ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲವ್ 360 ಲಾಸ್ ಆಗಲಿಲ್ಲ... ಆದರೆ..
Love 360 Movie Image

ಲವ್ 360. ಪ್ರೇಕ್ಷಕರಿಗೆ ಪ್ರೀತಿಯ ಬೇರೆಯದೇ ಅನುಭವ ನೀಡಿದ ಚಿತ್ರ. ಒಲವೇ ನೀನು ಗೆಳತಿಯೇ.. ಹಾಡಂತೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋಗಿತ್ತು. ರಚನಾ ಇಂದರ್ ಮತ್ತು ಪ್ರವೀಣ್ ಅಭಿನಯದ ಸಿನಿಮಾ ಪ್ರೀತಿಯ ಬೇರೊಂದು ಎತ್ತರವನ್ನು ತೋರಿಸಿತ್ತು. ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಚಿತ್ರ, ಶಶಾಂಕ್ ಮನವಿಯ ನಂತರ ಮೇಲೆದ್ದಿತ್ತು. ಸಿನಿಮಾ ಲಾಭದ ಹಳಿಗೆ ಬಂದಿತ್ತು.

ಲವ್ 360 ಸಿನಿಮಾ ಕೈ ಕಚ್ಚಲಿಲ್ಲ. ನಷ್ಟವಂತೂ ಆಗಲಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದ ಶೇ.75ರಷ್ಟು ಹಣ ಬಂದಿತ್ತು. ಉಳಿದ ಶೇ.25ರಷ್ಟು ಬಂಡವಾಳ ಥಿಯೇಟರಿಂದ ಬರಬೇಕಿತ್ತು. 2ನೇ ವಾರ ಚಿತ್ರ ಪಿಕಪ್ ಆಯಿತು. ಆದರೆ.. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಅನ್ನೋದಷ್ಟೇ ಬೇಸರ ಎನ್ನುತ್ತಾರೆ ಶಶಾಂಕ್.

ಲವ್ 360 ಮುಗಿದ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಜೊತೆ ಮೊದಲೇ ಘೋಷಿಸಿದ್ದಂತೆ ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಇನ್ನೊಂದೆರಡು ಮೂರು ದಿನಗಳಲ್ಲಿ ನಾಯಕಿಯ ಫೈನಲೈಸ್ ಮಾಡುತ್ತೇವೆ. ಇದು ನನ್ನ ಬ್ಯಾನರ್‍ನಲ್ಲೇ ತಯಾರಾಗುವ ಸಿನಿಮಾ. ಕ್ಯಾನ್‍ವಾಸ್ ದೊಡ್ಡದು. ಅದ್ಧೂರಿ ಬಜೆಟ್ ಅಂತೂ ಇರುತ್ತೆ ಎಂದಿದ್ದಾರೆ ಶಶಾಂಕ್.