ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ರೊಮ್ಯಾಂಟಿಕ್ ಲವ್ ಸ್ಟೋರಿಯ ಪೆಪ್ಪಿ ಸಾಂಗ್ ಎನ್ನಬಹುದಾದ ಚಿತ್ರದ ಪ್ರೋಮೋ ಸಾಂಗ್ ರಿಲೀಸ್ ಆಗಿದೆ. ಇದು ಗಲ್ಲಿಬಾಯ್ ಸಾಂಗ್‍ನ ಝಲಕ್ ಮಾತ್ರ. ಪೂರ್ತಿ ಸಾಂಗ್ ರಿಲೀಸ್ ಆಗೋದು ಸೆ.20ಕ್ಕೆ
ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಜೋಡಿಯ ರಾಣಾಗೆ ನಂದಕಿಶೋರ್ ನಿರ್ದೇಶಕ. ನವೆಂಬರ್ 11ಕ್ಕೆ ರಾಣಾ ರಿಲೀಸ್ ಆಗುತ್ತಿದೆ. ರಾಣಾ ಯೂತ್‍ಫುಲ್ ಲವ್ ಸ್ಟೋರಿ. ಆಕ್ಷನ್ ರೊಮ್ಯಾಂಟಿಕ್. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಸ್ಪೆಷಲ್ ಸಾಂಗಿನಲ್ಲಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರವಿದು.
ಈ ಗಲ್ಲಿ ಬಾಯ್ಸ್ ಹಾಡಿಗೆ ಚಂದನ್ ಶೆಟ್ಟಿಯವರೇ ಸಾಹಿತ್ಯವನ್ನೂ ಕೊಟ್ಟಿದ್ದಾರೆ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿದು.