ಒಂದು ಸಿನಿಮಾ ಗೆದ್ದರೆ ನಿರ್ಮಾಪಕರು ಖುಷಿಯಾಗುತ್ತಾರಷ್ಟೇ ಅಲ್ಲ. ಇನ್ನೊಂದಿಷ್ಟು ಹೊಸ ಹೊಸ ಸಿನಿಮಾ ಸಾಹಸಕ್ಕೆ ಕೈ ಹಾಕುತ್ತಾರೆ. ಗಾಳಿಪಟ 2 ಗೆಲುವಿನ ಬೆನ್ನಲ್ಲೇ ನಿರ್ಮಾಪಕ ರಮೇಶ್ ರೆಡ್ಡಿ ಮತ್ತೆ ಮೂರು ಹೊಸ ಸಿನಿಮಾ ಹೊಸ ಘೋಷಿಸಿದ್ದಾರೆ. ಕಳೆದ ತಿಂಗಳು ರಿಲೀಸ್ ಆದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸೂಪರ್ ಹಿಟ್ ಎನಿಸಿಕಂಡಿತ್ತು. ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಅನಂತ್ ನಾಗ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ರಮೇಶ್ ರೆಡ್ಡಿ ಮೂವರು ಹೀರೋಗಳಿಗೆ ಸಿನಿಮಾ ಘೋಷಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಲ್ ಶೀಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ತಂಡ ಘೋಷಣೆಯಾಗಲಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಶ್ರೀಮುರಳಿ ಜೊತೆಯಲ್ಲೂ ಹೊಸ ಸಿನಿಮಾ ಘೋಷಿಸಿದ್ದಾರೆ.
ಮೂರೂ ಚಿತ್ರಗಳಿಗೆ ನಿರ್ದೇಶಕರು ಹಾಗೂ ಕಥೆ ಫೈನಲ್ ಆಗಿದೆಯಂತೆ. ಅದು ಸದ್ಯಕ್ಕೆ ರಮೇಶ್ ರೆಡ್ಡಿ ಅವರಿಗೆ ಮಾತ್ರ ಗೊತ್ತು.