ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಪ್ರೇಮಿಗಳ ಹಬ್ಬವಾದ ಈ ಲವ್ ಸ್ಟೋರಿ ಯಶಸ್ವಿಯಾಗಿದೆ. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗಿದೆಯಷ್ಟೇ ಅಲ್ಲ, ಯಶಸ್ವಿ 25 ದಿನ ಪೂರೈಸಿದೆ. ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360.
ಒಲವೇ ನೀನು ಗೆಳತಿಯೇ.. ಹಾಡು, ರಚನಾ ಇಂದರ್ ಮುಗ್ಧತೆ, ಪ್ರವೀಣ್ ಪ್ರೀತಿಯ ತೀವ್ರತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರಕ್ಕೆ ಬೇರೆ ಭಾಷೆಗಳಲ್ಲೂ ಬೇಡಿಕೆ ಸೃಷ್ಟಿಯಾಗಿದ್ದು ರೀಮೇಕ್ ಬೇಡಿಕೆ ಬಂದಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ.
ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರದ ಬಗ್ಗೆ ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ. ಈಗ ಯಶಸ್ವಿ 25 ದಿನವನ್ನೂ ಪೂರೈಸಿ ಮುನ್ನುಗ್ಗುತ್ತಿದೆ.