ಮುದ್ದು ಮುದ್ದು ಮುಖದ ಮುಗ್ಧ ಚೆಲುವೆ ರಚಿತಾ ರಾಮ್.. ಕಣ್ಣಿಗೆ ಕೂಲಿಂಗ್ ಗ್ಲಾಸು.. ಮುಖದ ತುಂಬಾ ನಗು.. ಎಂದಿನಂತೆ ನೋಡುವವರೆನ್ನೆಲ್ಲ ಹಳ್ಳಕ್ಕೆ ಬೀಳಿಸೋ ಗುಳಿಕೆನ್ನೆ.. ನಿಧಾನವಾಗಿ ಹುಡುಗರ ಹೆಜ್ಜೆ ಹಾಕುತ್ತಿದ್ದರೆ..
ರೋಮಾಂಚನ ಹುಟ್ಟಿಸುವ ಅನೂಪ್ ಸಿಳೀನ್ ಮ್ಯೂಸಿಕ್.. ಮಾತಿಲ್ಲ.. ಕಥೆಯಿಲ್ಲ. ಬರೀ ಸಂಗೀತ ಸಿಂಚನ.. ನಡುವೆ ರೋಮಾಂಚನ..
ಹಾಗೆ ರಚಿತಾ ಸ್ಟೆಪ್ಪು ಹಾಕುತ್ತಿದ್ದರೆ ಶಿಳ್ಳೆ ಹೊಡೆದು ಎಂಟ್ರಿ ಕೊಡ್ತಾರೆ ಡಾಲಿ ಧನಂಜಯ್. ಬಿಳಿ ಪಂಚೆ, ಬಿಳಿ ಶರಟಿನ ಕನ್ನಡದ ಸಂಸ್ಕøತಿಯ ಪ್ರತೀಕದಂತಿರೋ ಡಾಲಿ ಎಂಟ್ರಿಯಾದ ಮೇಲೆ ಇಬ್ಬರೂ ಸೇರಿ ಕುಣಿಯತೊಡಗುತ್ತಾರೆ. ಮಾನ್ಸೂನ್ ರಾಗ ಚಿತ್ರಕ್ಕೆ ಇಬ್ಬರೂ ಪ್ರೇಕ್ಷಕರನ್ನು ಕರೆಯುತ್ತಿರುವುದು ಹೀಗೆ..
ಮುಂದಿನ ವಾರ ಮಾನ್ಸೂನ್ ರಾಗ ರಿಲೀಸ್ ಆಗುತ್ತಿದೆ. ಎಸ್.ಎ.ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕರಾಗಿದ್ದಾರೆ. ಇದೇ ಮೊದಲ ಬಾರಿಗೆ ರಚಿತಾ ರಾಮ್ ಮತ್ತು ಡಾಲಿ ಜೋಡಿಯಾಗಿದ್ದಾರೆ. ಕರಾವಳಿ ಸೆನ್ಸೇಷನ್ ಯಶಾ ಶಿವಕುಮಾರ್ ಕೂಡಾ ಇದ್ದಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಮೊದಲಾದ ಘಟಾನುಘಟಿ ತಾರಾಗಣದಲ್ಲಿ ಪ್ರೇಕ್ಷಕರಿಗೆ ಮೊದಲು ಸೆಳೆಯುತ್ತಿರೋದು ಅನೂಪ್ ಸಿಳೀನ್ ಸಂಗೀತವೇ.