ಬೆಂ.ಕೋ.ಶ್ರೀ. ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕರಲ್ಲೊಬ್ಬರು. ಈಗ ಬೆಂಕೋಶ್ರೀ ಪುತ್ರ ಅಕ್ಷರ್ ಆಲ್ಬಂ ಸಾಂಗ್‍ವೊಂದನ್ನು ತಂದಿದ್ದಾರೆ. ಈ ಆಲ್ಬಂ ಸಾಂಗ್‍ನಲ್ಲಿ ಮೊದಲ ಬಾರಿಗೆ ಏಕ್ ಲವ್ ಯಾ ಅನಿತಾ.. ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ಆಲ್ಬಂ ಹೆಸರು ಛೀ ಕಳ್ಳ. ರೀಷ್ಮಾ ಜೊತೆ ಹೆಜ್ಜೆ ಹಾಕಿರುವುದು ಹರ್ಷ. ಏನ್ ಚೆಂದನ ತಕ್ಕೋ.. ಖ್ಯಾತಿಯ ನವೀನ್ ಸಜ್ಜು ಹಾಡಿಗೆ ಇನ್ನಷ್ಟು ಕಿಕ್ ಕೊಟ್ಟಿದ್ದಾರೆ. ವಿಸ್ಮಯ ಸಂಗೀತ ಮತ್ತ ಸಾಹಿತ್ಯ ನೀಡಿದ್ದಾರೆ.
ನನಗೆ ಸಿನಿಮಾದಲ್ಲಿ ನಟಿಸೋ ಆಸೆಯಿದೆ. ಅದರ ಆರಂಭದ ಹೆಜ್ಜೆಯೇ ಈ ಛೀ ಕಳ್ಳ ಆಲ್ಬಂ ಸಾಂಗ್ ಎಂದು ಓಪನ್ನಾಗಿಯೇ ಹೇಳಿಕೊಂಡ ಅಕ್ಷರ್ ಸಿನಿಮಾ ಪ್ರವೇಶಕ್ಕೆ ರೆಡಿಯಾಗಿದ್ದಾರೆ.
ರೀಷ್ಮಾ ನಾಣಯ್ಯಗೆ ಇದು ಮೊದಲ ಆಲ್ಬಂ ಸಾಂಗ್. ಏಕ್ ಲವ್ ಯಾ ನಂತರ ಗಣೇಶ್ ಜೊತೆ ಬಾನದಾರಿಯಲ್ಲಿ, ಶ್ರೇಯಸ್ ಮಂಜು ಜೊತೆ ರಾಣಾ ಹಾಗೂ ಧನ್ವೀರ್ ಜೊತೆ ಮೊತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.