ಜಗವೇ ನೀನು ಗೆಳತಿಯೇ..
ನನ್ನಾ ಜೀವದ ಒಡತಿಯೇ..
ಉಸಿರೇ ನೀನು ಗೆಳತಿಯೇ..
ನನ್ನನ್ನು ನಡೆಸೋ ಸಾಥಿಯೇ..
ಈ ಹಾಡು.. ಹಾಡಿನ ತೀವ್ರತೆ.. ಸಾಲುಗಳು.. ಪದ ಪದಗಳಲ್ಲೂ ತುಂಬಿದ್ದ ಪ್ರೀತಿಯ ಮಾರ್ದವತೆ ಪ್ರೇಮಿಗಳನ್ನು ಥಿಯೇಟರಿಗೆ ಎಳೆದುಕೊಂಡು ಬಂದಿದೆ.
ಒಣ ಒಂಟಿ ಜೀವದಾ ಕೂಗಿಗೆ
ತಂಗಾಳಿ ತಂದ ಓ ದೈವವೇ..
ನಿನಗೇನು ನಾ ನೀಡಲೇ..
ಎಂದು ಪದಪದಗಳನ್ನೂ ಮುತ್ತಿನಂತೆ ಪೋಣಿಸಿ ಸ್ವತಃ ನಿರ್ದೇಶಕ ಶಶಾಂಕ್. ಅರ್ಜುನ್ ಜನ್ಯ ಸಂಗೀತದ ಜೊತೆಯಾಗಿದ್ದ ಹಾಡಿಗೆ ಸಿದ್ಧ್ ಶ್ರೀರಾಮ್ ಅಷ್ಟೇ ಮಾಧುರ್ಯ ತುಂಬಿ ಹಾಡಿದ್ದರು.
ಪ್ರವೀಣ್ ಮತ್ತು ರಚನಾ ಇಂದರ್ ಮುಗ್ಧತೆಯೆಂದರೆ ಇದೇನಾ ಎಂದು ಪ್ರೇಕ್ಷಕರು ಕೇಳಿಕೊಳ್ಳುವಂತೆ ನಟಿಸಿದ್ದರು. ಮುಗ್ಧತೆಯೇ ಮೈವೆತ್ತಂತಿದ್ದ ರಾಮ್-ಜಾನಕಿ ಎಂಬ ಯುವ ಪ್ರೇಮಿಗಳ ಪ್ರೀತಿಗೆ.. ಪ್ರೀತಿಯ ನಡುವೆಯೂ ಸುಳಿದಾಡುವ ಥ್ರಿಲ್ಲರ್ ರೋಮಾಂಚನಕ್ಕೆ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದಾರೆ. ಜಗವೇ ನೀನು ಗೆಳತಿಯೇ.. ಹೋಗಿ ಗೆಲುವೇ ನನ್ನ ಒಡತಿಯೇ ಆಗಿದೆ. ಸಿನಿಮಾ ಹಿಟ್ ಆಗುತ್ತಿದೆ.