ಬಳಪ ಹಿಡಿದ ಭಗವಂತಾ..
ಇರುತಾನೆ ನಮ ಸುತ್ತ..
ನಮ್ಮೆಲ್ಲರ ಹಣ ಬರಹ ತಿದ್ದೀ ಬರೆಯಲು..
ಗುರುಗಳು ನಮ್ಮ ಗುರುಗಳು..
ಆಹಾ.. ಇದು ಶಿಷ್ಯರು ಗುರುಗಳಿಗಾಗಿ.. ಪ್ರೀತಿಯಿಂದ ಭಕ್ತಿಯಿಂದ ಬರೆದಿರೋ ಗೀತೆ.. ಆ ಗೀತೆಯನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಎಂಬಂತೆ ಹಾಡಿದ್ದಾರೆ ವಿಜಯ ಪ್ರಕಾಶ್. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ಎಂಬಂತೆ ಅಕ್ಷರ ತಿದ್ದಿದ್ದಾರೆ ಡಾ.ವಿ. ನಾಗೇಂದ್ರ ಪ್ರಸಾದ್. ಗುರು ಶಿಷ್ಯರು ಚಿತ್ರದ ಹೊಸ ಹಾಡಿನ ಲಿರಿಕಲ್ ಗೀತೆ ಕೇಳಿದವರು ಗುರುಗಳನ್ನು ನೆನಪಿಸಿಕೊಳ್ಳೋದು ಖಂಡಿತಾ.
ಹಾಡಿನ ಲಿರಿಕಲ್ ವಿಡಿಯೋ ನೋಡಿ.. ಹಾಡು ಕೇಳಿ ಹಲವು ಗುರುಗಳು ಭಾವುಕರಾಗಿ ಮಾತನ್ನಾಡಿದ್ದಾರೆ. ಅದನ್ನೂ ಲಿರಿಕಲ್ ವಿಡಿಯೋನಲ್ಲಿ ತೋರಿಸಲಾಗಿದೆ. ಕ್ರಿಯೇಟಿವ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಡೈರೆಕ್ಟರ್ ಜಡೇಶ್ ಕೆ.ಹಂಪಿ ಪರಿಕಲ್ಪನೆಯ ಹಾಡಿದು. ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಗುರು ಶಿಷ್ಯರ ಕಥೆಯೇ ಇದೆ.