` ಧೀರನ್ ರಾಮಕುಮಾರ್ ಮೊದಲ ಸಿನಿಮಾ ಲಿಪ್ ಲಾಕ್ ಅನುಭವ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
ಧೀರನ್ ರಾಮಕುಮಾರ್ ಮೊದಲ ಸಿನಿಮಾ ಲಿಪ್ ಲಾಕ್ ಅನುಭವ
Shiva 143 Movie Image

ಕನ್ನಡದಲ್ಲಿ ಲಿಪ್ ಲಾಕ್ ರೊಮ್ಯಾನ್ಸ್ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಕನ್ನಡದಲ್ಲಿ ತೆರೆಯ ಮೇಲೆ ಲಿಪ್ ಲಾಕ್ ಮಾಡಿದ ಮೊದಲ ನಟ ರವಿಚಂದ್ರನ್. ಇತ್ತೀಚೆಗೆ ಚುಂಬನ ಅನ್ನೋದು ಕಾಮನ್ ಆಗಿ ಹೋಗಿದೆ. ಆರಂಭದಲ್ಲಿ ಕಿಸ್ಸಿಂಗ್ ಸೀನ್ ಸೃಷ್ಟಿಸುತ್ತಿದ್ದ ಸಂಚಲನಗಳೇ ಬೇರೆ. ರಾಜ್ ಬ್ಯಾನರ್ ಚಿತ್ರಗಳ ಕಥೆ ಬಿಡಿ.. ರೊಮ್ಯಾನ್ಸ್`ಗೂ ಲಿಮಿಟ್ ಇರುತ್ತಿತ್ತು. ನಾಯಕಿಯರನ್ನು ಗ್ಲಾಮರಸ್ ಆಗಿ ತೋರಿಸುವ ವಿಚಾರದಲ್ಲಿ ಪಾರ್ವತಮ್ಮನವರಂತೂ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಇದ್ದರು.

ಡಾ.ರಾಜ್ ಆಗಲೀ, ಶಿವಣ್ಣ, ರಾಘವೇಂದ್ರ ರಾಜಕುಮಾರ್ ಅಥವಾ ಪುನೀತ್ ಅವರಾಗಲೀ ತೆರೆಯ ಮೇಲೆ ಲಿಪ್ ಲಾಕ್ ಮಾಡಿಲ್ಲ. ಪುನೀತ್ ಕೂಡಾ ಮಡಿವಂತಿಕೆ ಇಟ್ಟುಕೊಂಡಿದ್ದವರೇ. ಆದರೆ ರಾಮಕುಮಾರ್ ತೆರೆಯ ಮೇಲೆ ಲಿಪ್ ಲಾಕ್ ಮಾಡಿದ್ದಾರೆ. ಗೆಜ್ಜೆನಾದ ಚಿತ್ರದಲ್ಲಿ ಶ್ವೇತಾ ಅವರ ಜೊತೆ ಲಿಪ್ ಲಾಕ್ ಆಗಿತ್ತು. ಆಗ ಅದು ಸೆನ್ಸೇಷನ್. ಆದರೆ ಈಗ ಅವರ ಪುತ್ರ ಧೀರನ್ ಮೊದಲ ಚಿತ್ರದಲ್ಲೇ ಮುತ್ತಿನ ಮಳೆ ಸುರಿಸಿದ್ದಾರೆ.

ಲಿಪ್ ಲಾಕ್ ಮಾಡಿರುವುದು ನಾನಲ್ಲ, ಶಿವ ಅನ್ನೋ ಕ್ಯಾರೆಕ್ಟರ್ ಎನ್ನುವ ಧೀರನ್ ಅದನ್ನು ನಾನು ನಾರ್ಮಲ್ ಆಗಿಯೇ ತಗೊಂಡೆ. ಅದು ಜಸ್ಟ್ ಆಕ್ಟಿಂಗ್ ಅನ್ನೋದು ನನ್ನ ತಲೆಯಲ್ಲಿತ್ತು. ಫೈಟ್ಸ್, ಎಮೋಷನ್ಸ್, ಕೊಲೆಗಳಂತೆಯೇ ಅದೂ ಒಂದು ಸೀನ್ ಸೀಕ್ವೆನ್ಸ್ ಅನ್ನೋದು ಗೊತ್ತಿತ್ತು. ನಿರ್ದೇಶಕರು ಮಾನ್ವಿತಾ ಅವರಿಗೆ ಕಂಫರ್ಟ್ ಇರಲಿ ಎಂದು ಕೇರ್ ತೆಗೆದುಕೊಂಡರು. ನನಗೆ ಅದು ದೊಡ್ಡ ವಿಷಯ ಎನ್ನಿಸಲಿಲ್ಲ ಎನ್ನುತ್ತಾರೆ ಧೀರನ್.

ಚಿತ್ರದಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್‍ನ್ನು ಮೀರಿದ ನಾಯಕನ ಮುಗ್ಧತೆ ಪ್ರೇಕ್ಷಕರನ್ನು ಕಾಡಲಿದೆ. ಅವನು ನಗಿಸುತ್ತಾನೆ, ಅಳಿಸುತ್ತಾನೆ, ಕಾಡುತ್ತಾನೆ.. ಅವನನ್ನು ನೋಡುತ್ತಿರುವ ಪ್ರೇಕ್ಷಕ ಅಯ್ಯೋ ಪಾಪ ಅಂದ್ಕೊಳ್ತಾನೆ. ಅಷ್ಟರಮಟ್ಟಿಗೆ ಸಿನಿಮಾ ಕಾಡುತ್ತೆ. ಬನ್ನಿ ಸಿನಿಮಾ ನೋಡಿ ಅನ್ನೋದು ಧೀರನ್ ಕೊಡೋ ಇನ್ವಿಟೇಷನ್.

ರಾಜ್ಯದಲ್ಲಿ ಕುಟುಂಬಕ್ಕಿರೋ ದೊಡ್ಡಮನೆ ಅನ್ನೋ ಹೆಸರು, ಗೌರವ ಉಳಿಸಿಕೊಂಡೇ ಹೊಸತನಕ್ಕೆ ಓಪನ್ ಆಗಬೇಕು ಅನ್ನೋದು ಧೀರನ್ ವಾದ.  ಶಿವ 143 ಈಗ ಥಿಯೇಟರುಗಳಿಗೆ ಎಂಟ್ರಿ ಕೊಟ್ಟಿದೆ. ಪ್ರೇಕ್ಷಕರ ಹೃದಯಕ್ಕೂ ಲಗ್ಗೆ ಹಾಕುವ ಉತ್ಸಾಹದಲ್ಲಿದ್ದಾರೆ ಧೀರನ್