ಹರೀಶ್ ರೈ. ಓಂ, ಜೋಡಿ ಹಕ್ಕಿ, ತಾಯವ್ವ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದವರು. ಇತ್ತೀಚೆಗೆ ಕೆಜಿಎಫ್ ಚಿತ್ರದಲ್ಲಿನ ಖಾಸಿಂ ಭಾಯ್ ಪಾತ್ರ ಹರೀಶ್ ರೈ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಓಂ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರದಲ್ಲಿ ಮಿಂಚಿದ್ದ ಹರೀಶ್ ರೈ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರಾದರೂ ಚಿತ್ರ ವಿಚಿತ್ರ ವಿವಾದಗಳಿಗೆ ಸಿಲುಕಿದ್ದರು. ಜೈಲು ವಾಸವನ್ನೂ ಅನುಭವಿಸಿದ್ದರು. ಹೊರಬಂದ ಮೇಲೆ ಹೊಸ ಬದುಕು ಕಟ್ಟಿಕೊಂಡಿದ್ದರು. ಇತ್ತೀಚೆಗೆ ಹರೀಶ್ ರೈ ಅವರಿಗೆ ಕೆಜಿಎಫ್ ಸಿನಿಮಾ ನಿಜಕ್ಕೂ ಸಂಭ್ರಮ ತಂದು ಕೊಟ್ಟಿತ್ತು. ಇದರ ನಡುವೆಯೇ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ ಹರೀಶ್ ರೈ.
ಹರೀಶ್ ರೈ ಅವರಿಗೆ ಥೈರಾಯ್ಡ್ ಸಮಸ್ಯೆ ಇತ್ತು. ಅದು ಈಗ ಕ್ಯಾನ್ಸರ್‍ಗೆ ತಿರುಗಿದೆ. ಶ್ವಾಸಕೋಶಕ್ಕೆ ಸಮಸ್ಯೆಯಾಗಿದೆ. ಥೈರಾಯ್ಡ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಮುಂದಿನ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ ಕಿದ್ವಾಯಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.