` ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360
Love 360 Movie Image

ಲವ್ 360. ಇದೇ ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ. ಶಶಾಂಕ್ ನಿರ್ದೇಶನವಿದ್ದ ಕಾರಣಕ್ಕೆ ನಿರೀಕ್ಷೆಯೂ ಜೋರಾಗಿತ್ತು. ಹೊಸಬರಾದ ಪ್ರವೀಣ್ ಮತ್ತು ರಚನಾ ಇಂದರ್ ನಾಯಕ ನಾಯಕಿಯರಾಗಿದ್ದ ಚಿತ್ರ ಲವ್ 360 ಬಗ್ಗೆ ಟ್ರೆಂಡಿಂಗ್ ಕೂಡಾ ಇತ್ತು. ಅದರಲ್ಲೂ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯಗೀತೆಯಾಗಿತ್ತು. ಆದರೆ ಮೊದಲ 2 ದಿನ ನಿರೀಕ್ಷೆಗೆ ತಕ್ಕಂತೆ ಜನರೇ ಬಂದಿರಲಿಲ್ಲ. ಆಗ ನಿರ್ದೇಶಕ ಶಶಾಂಕ್ ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನೋಡಿ. ನೀವು ಬರದೇ ಹೊದರೆ ಥಿಯೇಟರಿಂದ ತೆಗೆಯುತ್ತಾರೆ. ನೀವು ಖಂಡಿತಾ ಇಷ್ಟಪಡುತ್ತೀರಿ. ಜಗವೇ ನೀನು ಗೆಳತಿಯೇ ಹಾಡು ಇರುವ ಸಿನಿಮಾ ಇದು ಎಂದು ಕೇಳಿಕೊಂಡಿದ್ದರು. ಶಶಾಂಕ್ ಮನವಿ ಕೆಲಸ ಮಾಡಿದೆ. ಈಗ ಚಿತ್ರ ಗೆಲುವಿನ ಹಾದಿಗೆ ಬಂದಿದೆ.

ನಾನು ಪ್ರೇಕ್ಷಕರನ್ನು ದೂರುವುದಿಲ್ಲ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂಡಿರುವಾಗ ಜನರು ಬಾರದೇ ಇದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದ್ದಂತೂ ನಿಜ. ಆದರೆ ಈಗ ಪಿಕಪ್ ಆಗಿದೆ. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ಎಲ್ಲ ಕಡೆ ಉತ್ತಮ ರೆಸ್ಪಾನ್ಸ್ ಇದೆ ಎಂದಿದ್ದಾರೆ ಶಶಾಂಕ್.

ಸೆಕೆಂಡ್ ಹಾಫ್‍ನಲ್ಲಿ 1.10 ನಿಮಿಷ ಇದೆ. ಆದರೆ ಅಷ್ಟೂ ಅವಧಿಯಲ್ಲಿರೋದು ಕೇವಲ 30 ನಿಮಿಷ ಡೈಲಾಗ್. ಉಳಿದದ್ದೆಲ್ಲವನ್ನೂ ದೃಶ್ಯಗಳೇ ಹೇಳುತ್ತವೆ. ಇದು ಥಿಯೇಟರ್ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಜನ ನೋಡಲಿಲ್ಲ, ಇಷ್ಟ ಪಡಲಿಲ್ಲ ಎಂದಾಗ ನಾನು ಜನರನ್ನು ದೂರುವುದಿಲ್ಲ. ಆದರೆ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ದೂರುವವರು ಖಂಡಿತಾ ಈ ಚಿತ್ರ ನೋಡಿ ಎಂದಿದ್ದಾರೆ ಶಶಾಂಕ್.

ಲವ್ 360 ಕೇವಲ ಲವ್ ಸ್ಟೋರಿಯಲ್ಲ. ಅಲ್ಲೊಂದು ಕ್ರೈಂ ಮತ್ತು ಥ್ರಿಲ್ಲರ್ ಸ್ಟೋರಿಯೂ ಇದೆ. ಪ್ರೇಕ್ಷಕರು ನಿಧಾನವಾಗಿಯೇ ಥಿಯೇಟರಿಗೆ ಬರುತ್ತಿದ್ದು, ಚಿತ್ರ ಗೆಲುವಿನ ಹಾದಿಗೆ ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ.

ಇತ್ತೀಚೆಗೆ ಬಾಲಿವುಡ್‍ನಲ್ಲಿ ನಮ್ಮ ಚಿತ್ರ ಇಷ್ಟವಾಗದಿದ್ದರೆ ನೊಡಬೇಡಿ ಎಂಬ ಅಹಂಕಾರ ಮಾತುಗಳನ್ನಾಡಿ ಚಿತ್ರದ ಕಲೆಕ್ಷನ್ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರೀತಿಯ ಮನವಿಗೆ ಖಂಡಿತಾ ಪ್ರೇಕ್ಷಕರು ಸ್ಪಂದಿಸುತ್ತಾರೆ. ಮತ್ತದು ಒಳ್ಳೆಯ ಸಿನಿಮಾ ಆಗಿದ್ದರೆ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬುದಕ್ಕೆ ಲವ್ 360 ಸಾಕ್ಷಿ.