ಇಬ್ಬರು ಮುಗ್ಧ ಪ್ರೇಮಿಗಳು. ಅನಾಥರು. ಅವಳಿಗೋ ನೆನಪಿನ ಶಕ್ತಿಯೇ ಕಡಿಮೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದೊಂದೇ ಅವನ ಬದುಕಿನ ಗುರಿ. ಅವನೂ ಮುಗ್ಧ. ಅವಳೂ ಮುಗ್ಧೆ. ಅವರಿಬ್ಬರ ಮಧ್ಯೆ ಕ್ರೌರ್ಯವನ್ನೇ ತಿಂದು..ಕುಡಿದು ತೇಗಿರುವ ವಿಲನ್ಸ್ ಬರುತ್ತಾರೆ. ನಂತರ ಇಡೀ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಾ ಹೋಗುತ್ತೆ. ಪ್ರೇಕ್ಷಕರಿಗೆ ಲವ್ ಸ್ಟೋರಿ ಮೂಲಕ ಎಷ್ಟು ಕಚಗುಳಿ ಕೊಟ್ಟು, ಭಾವುಕರನ್ನಾಗಿಸುವ ಶಶಾಂಕ್.. ಆಮೇಲಾಮೇಲೆ ಭಾವುಕತೆಯ ದರ್ಬಾರ್ ನಡೆಸುತ್ತಾರೆ.
ಹೆಜ್ಜೆ ಹೆಜ್ಜೆಗೂ ಕುತೂಹಲ ಸೃಷ್ಟಿಸುತ್ತಾರೆ. ನಡುವೆ ಬರುವ ಹಾಡುಗಳು ಹೃದಯಕ್ಕೆ ತಂಪರೆಯುತ್ತವೆ. ಮುಗ್ಧ ಪ್ರೇಮಿಗಳ ಪಾತ್ರದಲ್ಲಿ ಪ್ರವೀಣ್ ಮತ್ತು ರಚನಾ ಇಂದರ್ ಹೃದಯಕ್ಕೇ ಲಗ್ಗೆಯಿಡುತ್ತಾರೆ.
ಶಶಾಂಕ್ ಅವರ ಲವ್ 360 ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಫ್ಯಾಮಿಲಿ ಸಮೇತ ನೋಡಬಹುದಾದ ಲವ್ ಥ್ರಿಲ್ಲರ್ ಸಿನಿಮಾ ಲವ್ 360.