` ಗಣೇಶ್ ಗೆ ಅನಂತನಾಗ್ ಪ್ರಶಸ್ತಿ..!!! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗಣೇಶ್ ಗೆ ಅನಂತನಾಗ್ ಪ್ರಶಸ್ತಿ..!!!
Ganesh, Ananth Nag at Gaalipata 2 Success Meet

ಅನಂತನಾಗ್ ಪ್ರಶಸ್ತಿ ಎಂದರೆ ಯಾವುದು? ಯಾರು ಕೊಟ್ಟರು? ಎಂದೆಲ್ಲ ಕನ್‍ಫ್ಯೂಸ್ ಆಗಬೇಡಿ. ಆದರೆ ಗಣೇಶ್ ಅವರಿಗೆ ಸಿಕ್ಕಿರೋ ಈ ಅವಾರ್ಡನ್ನು ಕೊಟ್ಟಿರೋದು ಸ್ವತಃ ಅನಂತನಾಗ್. ಗಣೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕರೂ ಈ ಪ್ರಶಸ್ತಿಯ ಮುಂದೆ ಅದು ಚಿಕ್ಕದೇ ಎನಿಸಿದರೆ ಅಚ್ಚರಿಯಿಲ್ಲ. ಇದೆಲ್ಲ ಆಗಿದ್ದು ಗಾಳಿಪಟ 2 ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ.

ಗಾಳಿಪಟ 2ನಲ್ಲಿ ಅನಂತನಾಗ್ ಕನ್ನಡ ಮೇಷ್ಟ್ರು ಪಾತ್ರ ಮಾಡಿದ್ದಾರೆ. ಮೂವರು ಹೀರೋಗಳು, ಮೂವರು ಹೀರೋಯಿನ್ನುಗಳಿದ್ದರೂ ಅನಂತನಾಗ್ ಪಾತ್ರ ಪ್ರೇಕ್ಷಕರನ್ನು ಆವರಿಸಿಕೊಂಡು ಬಿಡುತ್ತದೆ. ಯೋಗರಾಜ್ ಭಟ್ಟರಂತೂ ತಮ್ಮ ಚಿತ್ರದ ಗೆಲುವಿಗೆ ತನ್ನನ್ನು ಸರಿದಾರಿಗೆ ಅನಂತನಾಗ್ ಅವರೇ ಕಾರಣ ಎಂದೂ ಹೇಳಿಬಿಟ್ಟರು. ಹೀಗಿರುವಾಗ..

ಗಣೇಶ್ ಅವರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ.

ಗಣೇಶ್ ಎದುರು ನಟಿಸುವಾಗ ನಾನು ಇನ್ನೂ ಚೆನ್ನಾಗಿ ನಟಿಸಬಹುದು. ಅವರು ಕೂಡಾ ನನ್ನಂತೆಯೇ ನಟಿಸುತ್ತಾರೆ.ಅವರಿಂದಾಗಿ ಅವರೊಂದಿಗಿನ ದೃಶ್ಯಗಳು ಎತ್ತರಕ್ಕೆ ಹೋಗುತ್ತವೆ... ಹೀಗೆ ಹೇಳಿದ್ದು ಬೇರಾರೋ ಅಲ್ಲ, ಸ್ವತಃ ಅನಂತನಾಗ್.

ವೇದಿಕೆಯ ಕೆಳಗೆ ನಿಂತು ಅನಂತನಾಗ್ ಮಾತು ಕೇಳುತ್ತಿದ್ದ ಗಣೇಶ್ ಎಷ್ಟು ಭಾವುಕರಾದರೆಂದರೆ ತಕ್ಷಣ ಹೋಗಿ ಅನಂತನಾಗ್ ಅವರ ಕಾಲುಮುಟ್ಟಿ ನಮಸ್ಕರಿಸಿದರು.

ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವ ನಟರಲ್ಲೊಬ್ಬರಾಗಿರುವ ಅನಂತನಾಗ್ ಅವರಿಂದ ಹೊಗಳಿಸಿಕೊಳ್ಳೋದಷ್ಟೇ ಅಲ್ಲ, ನನ್ನಂತೆಯೇ ನಟಿಸುತ್ತಾನೆ ಎಂದು ಹೇಳಿಸಿಕೊಳ್ಳೋದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ ಹೇಳಿ..