ಕೆಜಿಎಫ್ ಚಾಪ್ಟರ್ 2. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಸಿನಿಮಾ. ಈ ಚಿತ್ರದ ಮೂಲಕ ರಾಕಿಭಾಯ್ ಅನ್ನೋ ಹೆಸರು ಈಗ ಇಂಡಿಯಾದ ಮನೆ ಮನೆಗೂ ತಲುಪಿದೆ. ಬಾಕ್ಸಾಫೀಸಿನಲ್ಲಿ ಸಾವಿರಾರು ಕೋಟಿ ದುಡಿದ ಕೆಜಿಎಫ್ ಚಾಪ್ಟರ್ 2, ಒಟಿಟಿಗಳಲ್ಲೂ ನಂ.1 ಸ್ಥಾನ ಅಲಂಕರಿಸಿತ್ತು. ಈಗ ಮನೆ ಮನೆಗೆ ಬರುತ್ತಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಹಕ್ಕುಗಳನ್ನು ಝೀಟಿವಿ ಖರೀದಿಸಿತ್ತು. ಇದೇ 20ನೇ ತಾರೀಕು ಅಂದರೆ ಶನಿವಾರ ರಾತ್ರಿ 7ಕ್ಕೆ ಸರಿಯಾಗಿ ಮನೆ ಮನೆಯಲ್ಲೂ ರಾಕಿಭಾಯ್ ದರ್ಶನ ಕೊಡಲಿದ್ದಾನೆ. ಶ್ರೀನಿಧಿ ಜೊತೆ ರೊಮ್ಯಾನ್ಸ್ ಮಾಡುತ್ತಾನೆ. ಅಧೀರನ ಜೊತೆ ಗುದ್ದಾಡುತ್ತಾನೆ. ರಮಿಕಾ ಸೇನ್ ಠೇಂಕಾರವನ್ನು ಎದುರಿಸುತ್ತಾನೆ. ಝೀ ಕನ್ನಡದಲ್ಲಿ ಪ್ರಶಾಂತ್ ನೀಲ್ ಸೃಷ್ಟಿಸಿದ ಮ್ಯಾಜಿಕಲ್ ಸಿನಿಮಾ ಕಣ್ತುಂಬಿಕೊಳ್ಳಬಹುದು.