ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಯನ್ನೂ ಲೇವಡಿ ಮಾಡಿ ಹಾಡಿದ್ದ ಸಿನಿಮಾ ಗಾಳಿಪಟ 2. ಅಂತಾದ್ದೊಂದು ಚಿತ್ರದ ನಿರ್ಮಾಪಕ ಪಾಸ್ ಆಗಿದ್ದಾರೆ. ಗಾಳಿಪಟ 2 ಚಿತ್ರತಂಡ ಬುಧವಾರ ಸಕ್ಸಸ್ ಮೀಟ್ ಕರೆದಿತ್ತು. ಆದರೆ ನಿರ್ಮಾಪಕರಾದ ರಮೇಶ್ ರೆಡ್ಡಿ ಇದು ಸಕ್ಸಸ್ ಮೀಟ್ ಅಲ್ಲ, ಥ್ಯಾಂಕ್ಸ್ ಮೀಟ್. ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದರು ರಮೇಶ್ ರೆಡ್ಡಿ.
ನಾನು ಚಿತ್ರದ ಕಥೆ ಕೇಳಿಲ್ಲ. ಅನಂತ್ ಸರ್ ಓಕೆ ಅಂದ್ರು. ಅಷ್ಟೆ. ಭಟ್ಟರ ಮೇಲೆ ನಂಬಿಕೆಯಿತ್ತು ಎಂದ ರಮೇಶ್ ರೆಡ್ಡಿ ವೀರೇಶ್ ಥಿಯೇಟರಲ್ಲಿ ರಿಲೀಸ್ ದಿನ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದರಂತೆ. ಗಾಳಿಪಟದಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ಕ್ಷಣ ನಮ್ಮ ನಿರ್ಮಾಪಕರು ವೀರೇಶ್ ಥಿಯೇಟರಲ್ಲಿ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದು ಎಂದರು.
ಅನಂತನಾಗ್, ಯೋಗರಾಜ್ ಭಟ್, ಗಣೇಶ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ದಿಗಂತ್, ಜಯಂತ ಕಾಯ್ಕಿಣಿ, ರಂಗಾಯಣ ರಘು, ಪದ್ಮಜಾ ರಾವ್ ಎಲ್ಲರೂ ವೇದಿಕೆಯಲ್ಲಿ ಸೇರಿಕೊಂಡು ಗೆಲುವನ್ನು ಸಂಭ್ರಮಿಸಿದರು.