` ಲವ್ 360 : ಡಾಕ್ಟರ್ ಪ್ರವೀಣ್ ಆಕ್ಟರ್ ಆಗಿದ್ದು ಹೇಗೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲವ್ 360 : ಡಾಕ್ಟರ್ ಪ್ರವೀಣ್ ಆಕ್ಟರ್ ಆಗಿದ್ದು ಹೇಗೆ?
Actor Praveen Image

ಲವ್ 360 ಚಿತ್ರದ ಹೀರೋ ಪ್ರವೀಣ್ ವೃತ್ತಿಯಲ್ಲಿ ವೈದ್ಯ. ಎಂಬಿಬಿಎಸ್ ಓದಿರುವ ಪ್ರವೀಣ್ ನಂತರ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾ ರಂಗವನ್ನ. ಸದ್ಯಕ್ಕೆ ಟ್ರೆಂಡಿಂಗ್‍ನಲ್ಲಿ ಎಲ್ಲರಗೂ ಗೊತ್ತಿರೋ ಹೆಸರು ಡಾ.ಸಾಯಿ ಪಲ್ಲವಿ ಅವರದ್ದು ಮಾತ್ರ. ಅವರು ಡಾಕ್ಟರ್ ಓದಿ ಆಕ್ಟರ್ ಆಗಿರುವ ನಟಿ. ಕಾರ್ಡಿಯಾಲಜಿಸ್ಟ್. ನಟಿ ಶ್ರೀಲೀಲಾ ಕೂಡಾ ಇತ್ತೀಚೆಗೆ ಎಂಬಬಿಎಸ್ ಕಂಪ್ಲೀಟ್ ಮಾಡಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರಾಗಿರುವ ಡಾ.ರಾಜಶೇಖರ್ ಸೇರಿದಂತೆ ಹಲವರು ಡಾಕ್ಟರ್ ಆಗಿದ್ದವರೇ.

ಕನ್ನಡದಲ್ಲಿ ಜಯಮ್ಮನ ಮಗ ಚಿತ್ರದಲ್ಲಿ ನಟಿಸಿದ್ದ ಭಾರತಿ ಕೂಡಾ ವೈದ್ಯೆಯೇ. ಈಗ ಮತ್ತೊಬ್ಬ ಡಾಕ್ಟರ್ ಆಗಿ ಆಕ್ಟರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಡಾ.ಪ್ರವೀಣ್. ಡಾ.ಪ್ರವೀಣ್ ವೃತ್ತಿಯಲ್ಲಿ ಡಾಕ್ಟರ್. ಹೊಸಪೇಟೆಯಲ್ಲಿ ಪ್ರವೀಣ್ ಅವರ ತಂದೆ-ತಾಯಿ ಸೇವಾ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಹೊಸಪೇಟೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಇವರ ಕುಟುಂಬಕ್ಕಿರುವ ಗೌರವವೇ ಬೇರೆ. ಆಕ್ಟರ್ ಆಗುವ ಕನಸೂ ಇತ್ತು. ಅದೀಗ ಲವ್ 360 ಚಿತ್ರದ ಮೂಲಕ ಈಡೇರಿದೆ.

ನಟಿಸಬೇಕು ಅನ್ನೋ ಆಸೆ ಇತ್ತು. ಹೊಸ ನಿರ್ದೇಶಕರಿಗೆ ಹುಡುಕುತ್ತಿದ್ದೆವು. ನನ್ನ ಅಂಕಲ್ ನಾಗರಾಜ್ ತೆಲುಗಿನಲ್ಲಿ ವಿತರಕರಾಗಿದ್ದಾರೆ. ಅವರು ನನಗೆ ಸಜೆಸ್ಟ್ ಮಾಡಿದ ಹೆಸರು ಶಶಾಂಕ್ ಅವರದ್ದು. ಅವರ ಚಿತ್ರಗಳು ಇಷ್ಟವಾದವು. ಕೃಷ್ಣಲೀಲಾ ನನಗೆ ತುಂಬಾ ಇಷ್ಟ. ಇದಾದ ಮೇಲೆ 2 ವರ್ಷ ನಟನೆಯ ತರಬೇತಿ ತೆಗೆದುಕೊಂಡೆ. ಅದಾದ ಮೇಲೆ ಶಶಾಂಕ್ ಮತ್ತೆರಡು ತಿಂಗಳ ವರ್ಕ್‍ಶಾಪ್ ಮಾಡಿಸಿದರು. ಹೊಸಬರೊಂದಿಗೆ ಶಶಾಂಕ್ ಅವರು ಬೆರೆಯುವ ರೀತಿ ಇಷ್ಟವಾಯಿತು. ನನಗೆ ಸರಿ ಎನ್ನಿಸಿದಂತೆ ಹಾಗೂ  ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ ಎನ್ನುತ್ತಾರೆ ಪ್ರವೀಣ್.

ಪ್ರವೀಣ್ ಎದುರು ನಾಯಕಿಯಾಗಿರುವುದು ರಚನಾ ಇಂದರ್. ಲವ್ 360 ಇದೇ ವಾರ ರಿಲೀಸ್ ಆಗುತ್ತಿದೆ. ಇದುವರೆಗೆ ಬಂದಿರೋ ಪ್ರೋಮೋ, ಹಾಡುಗಳಲ್ಲಿ ಪ್ರವೀಣ್ ಪ್ರಾಮಿಸಿಂಗ್ ಎನಿಸಿದ್ದಾರೆ.