` ನಿರ್ಮಾಪಕರ ಸಂಘಕ್ಕೆ ಬಣಕಾರ್ ಅಧ್ಯಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿರ್ಮಾಪಕರ ಸಂಘಕ್ಕೆ ಬಣಕಾರ್ ಅಧ್ಯಕ್ಷ
Umesh Banakar

ರಾಜ್ಯ ನಿರ್ಮಾಪಕರ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಉಮೇಶ್ ಬಣಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಬಣಕಾರ್ ಅವರಿಗೆ ಪ್ರತಿಸ್ಪರ್ಧಿಯಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಬಣಕಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ವಿಶೇಷ. ಕೋವಿಡ್ ಸೇರಿದಂತೆ ಚಿತ್ರೋದ್ಯಮ ಎದುರಿಸುವ ಹಲವು ಬಿಕ್ಕಟ್ಟುಗಳ ಸಮಯದಲ್ಲಿ ಬಣಕಾರ್ ಮುಂದಾಳತ್ವ ವಹಿಸಿಕೊಳ್ಳುವುದು, ಸರ್ಕಾರದ ಜೊತೆ ವ್ಯವಹರಿಸುವ ಚಾತುರ್ಯ ಬಣಕಾರ್ ಅವರ್ನು ಅವಿರೋಧವಾಗಿ ಆಯ್ಕೆಯಾಗುವಂತೆ ಮಢಿವೆ. ಜೊತೆಗೆ ಬಣಕಾರ್ ವಿವಾದ ಮುಕ್ತ ವ್ಯಕ್ತಿ ಎನ್ನುವುದೂ ಒಂದು ಕಾರಣ.

ಗುರುರಾಜ ಕಲ್ಯಾಣ ಮಂಟಪದಲ್ಲಿ ನಿರ್ಮಾಪಕರ ಸಂಘದ ಇತರ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಉಮೇಶ್ ಬಣಕಾರ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿ ಆಯ್ಕೆಯಾದರು. ಖಚಾಂಚಿಯಾಗಿ ಆರ್.ಎಸ್.ಗೌಡ, ಕಾರ್ಯದರ್ಶಿ ಸ್ಥಾನಕೆಕ ಪ್ರವೀಣ್ ಕುಮಾರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರಮೇಶ್ ಯಾದವ್ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಎನ್.ಎಂ.ಸುರೇಶ್, ಬಾಮಾ ಗಿರೀಶ್, ರಾಜೇಶ್ ಬ್ರಹ್ಮಾವರ್, ಎ.ಗಣೇಶ್, ಅವನಾಶ್ ಯು.ಶೆಟ್ಟಿ, ಶಿಲ್ಪಾ ಶ್ರೀನಿವಾಸ್, ಟೇಶಿ ವೆಂಕಟೇಶ್, ಜೆಜೆ ಕೃಷ್ಣ, ಪತ್ತಿ ಗುರುಪ್ರಸಾದ್, ಪ್ರಿಯಾ ಹಾಸನ್, ಅನಿತಾರಾಣಿ, ಆಂತರ್ಯ ಸತೀಶ್ ಆಯ್ಕೆಯಾಗಿದ್ದಾರೆ.