Print 
drishyam 3,

User Rating: 0 / 5

Star inactiveStar inactiveStar inactiveStar inactiveStar inactive
 
ದೃಶ್ಯಂ 3ಗೆ ವೇದಿಕೆ ಸಿದ್ಧ..!
Drishyam 3 Movie Image

ದೃಶ್ಯಂ. ಮಲಯಾಳಂನಲ್ಲಿ ಸೃಷ್ಟಿಯಾದ ಕ್ರೈಂ ಥ್ರಿಲ್ಲರ್. ಕನ್ನಡ, ತಮಿಳು, ತೆಲುಗು, ಹಿಂದಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ. ಮಲಯಾಳಂನ ಈ ಸಿನಿಮಾ ಮೂಲಕ ನಿರ್ದೇಶಕ ಜಿತು ಜೋಸೆಫ್, ನಟ ಮೋಹನ್ ಲಾಲ್, ಮೀನಾ ಎಲ್ಲರೂ ಇನ್ನೊಮ್ಮೆ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು. ಕನ್ನಡದಲ್ಲಿ ರೀಮೇಕ್ ಮಾಡಿ ಗೆದ್ದಿದ್ದು ರವಿಚಂದ್ರನ್. ತೆಲುಗಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ಕಮಲಹಾಸನ್, ಹಿಂದಿಯಲ್ಲಿ ಅಜಯ್ ದೇವಗನ್ ನಟಿಸಿ ಗೆದ್ದರು. 9 ವರ್ಷಗಳ ಹಿಂದೆ ಮೊದಲ ದೃಶ್ಯ ಬಂದು ಗೆದ್ದ ಮೇಲೆ, 2ನೇ ದೃಶ್ಯ 2021ರಲ್ಲಿ ಬಂದು ಗೆದ್ದಿತ್ತು. ಈಗ ದೃಶ್ಯಂ 3 ಪೋಸ್ಟರ್ ಹೊರಬಿದ್ದಿದೆ.

ಅಚಾನಕ್ ಆಗಿ ನಡೆದ ಕೊಲೆಯಿಂದ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳೋ ನಾಯಕ, ಕ್ಷಣ ಕ್ಷಣಕ್ಕೂ ಉಸಿರು ಬಿಗಿಹಿಡಿಯುವಂತೆ ಮಾಡುವ ಚಿತ್ರಕಥೆ ಎರಡೂ ದೃಶ್ಯಗಳಲ್ಲಿತ್ತು. ಅವನು ಮಾತ್ರ ತನ್ನ ಕುಟುಂಬವನ್ನು ಕಾಯುತ್ತಲೇ ಇರುತ್ತಾನೆ ಎನ್ನುವ ಮೂಲಕ 3ನೇ ಸೀಕ್ವೆಲ್ ಸುಳಿವೂ ಸಿಕ್ಕಿತ್ತು. ಈಗ ದೃಶ್ಯಂ 3 ಪೋಸ್ಟರ್‍ನಲ್ಲಿ ಮೋಹನ್ ಲಾಲ್ ಕೈಗೆ ಕೋಳವಿದೆ.

ಈ ಸೀಕ್ವೆಲ್‍ನಲ್ಲಿ ಮೋಹನ್ ಲಾಲ್ ನಿಜಕ್ಕೂ ಶಿಕ್ಷೆ ಅನುಭವಿಸ್ತಾನಾ? ಅಥವಾ ಮತ್ತೊಮ್ಮೆ ಚಳ್ಳೆಹಣ್ಣು ತಿನ್ನಿಸ್ತಾನಾ? ಕುತೂಹಲವಂತೂ ಇದೆ. ಆಗಸ್ಟ್ 17ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.