ಯೋಗರಾಜ್ ಭಟ್ಟರೀಗ ಫುಲ್ ಖುಷಿ ಮೂಡಿನಲ್ಲಿದ್ದಾರೆ. ಗಾಳಿಪಟ 2 ಭರ್ಜರಿಯಾಗಿಯೇ ಗೆದ್ದಿದೆ. 2ನೇ ದಿನ ಮತ್ತಷ್ಟು ಶೋಗಳು ಸೇರ್ಪಡೆಯಾಗಿರೋದು ಚಿತ್ರ ಹಿಟ್ ಆಗಿರುವುದಕ್ಕೆ ಸಾಕ್ಷಿ. ಎಲ್ಲ ಕಡೆಯೂ ಹೌಸ್‍ಫುಲ್ ಆಗಿರುವುದು ಗಣಿ-ಭಟ್ಟರ ಮೋಡಿಗೆ ಪ್ರೇಕ್ಷಕರು ಬಿದ್ದಿರೋದಕ್ಕೆ ಸಾಕ್ಷಿ.
ವೀರೇಶ್ ಥಿಯೇಟರಿಗೆ ಪ್ರೇಕ್ಷಕರನ್ನು ನೋಡಲು ಬಂದಿದ್ದ ಭಟ್ಟರಿಗೆ ಅಭಿಮಾನಿಯೊಬ್ಬರು ಕಾಲಿಗೆ ಬಿದ್ದರು. ಭಟ್ಟರೂ ಕಾಲಿಗೆ ಬಿದ್ದರು. ಅಭಿಮಾನಿಯ ಪ್ರೀತಿ ಅಷ್ಟಕ್ಕೇ ನಿಲ್ಲಲಿಲ್ಲ. ಭಟ್ಟರನ್ನು ಅಪ್ಪಿಕೊಂಡು ಲಿಪ್ ಲಾಕ್ ಮಾಡಿಬಿಟ್ಟರು. ಅದಕ್ಕೇ ಈಗ ಭಟ್ಟರ ಮಗಳು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪ್ಲೀಸ್ ಡೋಂಟ್ ಕಿಸ್ ಹಿಮ್ ಎಂದಿದ್ದಾರೆ. ಜೊತೆಗೆ ಭಟ್ಟರನ್ನು ಮಗಳು ಪುನರ್ವಸು ಹಾಗೂ ಪತ್ನಿ ರೇಣುಕಾ ಭಟ್ ಇಬ್ಬರೂ ಕಾಮಿಡಿ ಮಾಡುತ್ತಿರೋ ವಿಡಿಯೋವನ್ನು ಗಣೇಶ್ ಶೇರ್ ಮಾಡಿದ್ದಾರೆ. ನೋಡಿ.. ಭಟ್ರು ಲೂಸ್ ಆಗಿದ್ದಾರೆ ಅಂತಾ ನಾನು ಹೇಳಿದ್ರೂ ಯಾರೂ ನಂಬಲಿಲ್ಲ. ಈಗ ಭಟ್ರ ಹೆಂಡತಿ, ಮಗಳೇ ಕನ್ಫರ್ಮ್ ಮಾಡಿದ್ದಾರೆ. ಗಾಳಿಪಟ ನೋಡಿದ ಅಭಿಮಾನಿಗಳು ತೋರಿಸ್ತಿರೋ ಪ್ರೀತಿಗೆ ಭಟ್ರು ಹೆಂಗೆಂಗೋ ಆಗವ್ರೆ.. ಕಂಟ್ರೋಲ್‍ಗೆ ಸಿಗ್ತಾ ಇಲ್ಲ. ದಯವಿಟ್ಟು ಭಟ್ರ ಕೈಗೆ ತಮಟೆ ಕೊಡಬೇಡಿ ಪ್ಲೀಸ್ ಅಂತಾ ರಿಕ್ವೆಸ್ಟ್ ಮಾಡಿದ್ದಾರೆ.
ಗಾಳಿಪಟದ ಕಲೆಕ್ಷನ್ ಮಾತ್ರ ಕಂಟ್ರೋಲ್‍ಗೆ ಸಿಗದಂತೆ ಏರುತ್ತಿದೆ. ರಮೇಶ್ ರೆಡ್ಡಿ ಪ್ರಾಯಶಃ ಅಲ್ಲ.. ಫುಲ್ ಖುಷ್ ಹುವಾ..