ಮಾನ್ಸೂನ್ ರಾಗ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಆಗಸ್ಟ್ 19ಕ್ಕೆ ರಿಲೀಸ್ ಆಗಬೇಕಿತ್ತು. ಚಿತ್ರದ ಟ್ರೇಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿತ್ತು. ಡಾಲಿ ಧನಂಜಯ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣಿನಲ್ಲೇ ಮಾತನಾಡಿದ್ದ ಲವ್ ಸ್ಟೋರಿ. ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದರು. ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.
ಸಿನಿಮಾದ ಟ್ರೇಲರಿನಲ್ಲಿ ಮಳೆ ಮತ್ತು ಸಂಗೀತ ಎರಡನ್ನೂ ಮಿಕ್ಸ್ ಮಾಡಲಾಗಿತ್ತು. ಈ ಅನುಭವವನ್ನು ಇಡೀ ಸಿನಿಮಾದಲ್ಲಿ ನೀಡುವುದಕ್ಕೆ ಚಿತ್ರತಂಡ ಮುಂದಾಗಿರುವುದೇ ಚಿತ್ರದ ಬಿಡುಗಡೆ ಮುಂದೆ ಹೋಗೋಕೆ ಕಾರಣ. ಚಿತ್ರದ ಕ್ವಾಲಿಟಿ ಹೆಚ್ಚಿಸಬೇಕು. ಮಳೆ ಮತ್ತು ಸಂಗೀತ ಎರಡೂ ಮಿಕ್ಸ್ ಆಗಿ ಪ್ರೇಕ್ಷಕರಿಗೆ ಥ್ರಿಲ್ ಕೊಡಬೇಕು. ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದು ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಕೇಳಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ವಿಖ್ಯಾತ್ ಚಿತ್ರದ ಬಿಡುಗಡೆಯನ್ನೇ ಮುಂದೆ ಹಾಕಿದ್ದಾರೆ.
ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಚಿತ್ರ ರೆಗ್ಯುಲರ್ ಚಿತ್ರಗಳಿಗಿಂತ ಹೊರತಾದ ಬೇರೆಯದೇ ಲೆವೆಲ್ಲಿನಲ್ಲಿದೆ. ಅದನ್ನೂ ಇನ್ನೂ ಒಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಿರತವಾಗಿ ಮಾನ್ಸೂನ್ ರಾಗ ಟೀಂ.