ಅಮೀರ್ ಖಾನ್ ವೃತ್ತಿ ಜೀವನದ ಕಳೆದ 13 ವರ್ಷಗಳಲ್ಲಿ ಅತ್ಯಂತ ಕಡಿಮೆ ಗಳಿಕೆಯ ಓಪನಿಂಗ್ ಕಂಡ ಚಿತ್ರ ಲಾಲ್ ಸಿಂಗ್ ಚಡ್ಡಾ. ಮೊದಲ ದಿನದ ಗಳಿಕೆ 11 ಕೋಟಿಯ ಆಸುಪಾಸು.
2ನೇ ದಿನ 1300ಕ್ಕೂ ಹೆಚ್ಚು ಶೋಗಳೇ ಕ್ಯಾನ್ಸಲ್. ಜನರಿಲ್ಲ. ಬುಕ್ಕಿಂಗ್ ಇಲ್ಲ.
ಅಮೀರ್ ಚಿತ್ರಗಳೆಂದರೆ ಒಂದೆರಡು ದಿನದಲ್ಲಿ 100 ಕೋಟಿ ಕಲೆಕ್ಷನ್‍ನ್ನು ಸಲೀಸಾಗಿ ದಾಟುತ್ತಿದ್ದವು. ಅಮೀರ್`ರ ಹಿಂದಿನ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್‍ನಂತ ಚಿತ್ರವೂ (ವಿಮರ್ಶಕರ ಪ್ರಕಾರ ಇದು ಅಮೀರ್ ಚಿತ್ರಗಳಲ್ಲೇ ಅತ್ಯಂತ ಡಬ್ಬಾ ಸಿನಿಮಾ) ಮೊದಲ ದಿನ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆದರೆ, ಲಾಲ್ ಸಿಂಗ್ ಚಡ್ಡಾ ದಬ್ಬಾಕ್ಕೊಂಡಿದೆ.
ಇದರ ಮಧ್ಯೆ ಚಡ್ಡಾ ಚಿತ್ರದಲ್ಲೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದೃಶ್ಯಗಳಿವೆ ಎಂಬ ಆರೋಪ ಕೇಳಿ ಬಂದಿವೆ. ಚಿತ್ರದಲ್ಲಿ ದೇವರ ಪೂಜೆ, ಪಾಠ ಮಾಡೋದ್ರಿಂದ ಮಲೇರಿಯಾ ಬರುತ್ತೆ ಅಂತಾ ತಾಯಿ ಮಗನಿಗೆ ಹೇಳೋ ದೃಶ್ಯವಿದೆಯಂತೆ. ಅಮೀರ್ ಖಾನ್ ಸಿಖ್ ಪಾತ್ರದಲ್ಲಿ ನಟಿಸಿರೋದ್ರಿಂದ ಇದು ಸಿಖ್ಖರು ಮತ್ತು ಹಿಂದೂಗಳು ಇಬ್ಬರ ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ಭಾರತೀಯ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರನ್ನೇ ಆಗಲೀ, ಮಾನಸಿಕ ಬೆಳವಣಿಗೆಯಾಗದ ವ್ಯಕ್ತಿಗಳನ್ನೇ ಆಗಲಿ ಸೇರಿಸಿಕೊಳ್ಳಲ್ಲ. ಜೊತೆಗೆ ಸೈನ್ಯದಲ್ಲಿ ಸಿಖ್ಖರಿಗೆ ಗಡ್ಡ ಬಿಡುವ, ಪೇಟಾ ಧರಿಸಲು ಅವಕಾಶವಿದೆ. ಹೀಗಾಗಿ ಚಡ್ಡಾ ಚಿತ್ರ ಭಾರತೀಯ ಸೇನೆಗೂ ಮಾಡಿದ ಅವಮಾನ ಎಂದು ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಸೇರಿದಂತೆ ಹಲವರು ಕಿಡಿ ಕಾರಿದ್ದಾರೆ.
ಇನ್ನು ಚಿತ್ರದಲ್ಲಿ ಪಾಕಿಸ್ತಾನೀಯರನ್ನೂ ಹೊಗಳುವ ದೃಶ್ಯವಿದ್ದು ಅದು ಹಿಂದೂಗಳನ್ನು ಇನ್ನಷ್ಟು ಕೆರಳಿಸಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಪಾರ್ಕಿಂಗ್ ಶುಲ್ಕದ ಬಿಸಿನೆಸ್‍ನ್ನು ಚಡ್ಡಾ ಮುರಿಯಬಹುದು ಎಂಬ ಕಾಮಿಡಿಗಳೂ ಕೇಳಿಬರುತ್ತಿವೆ.
ಅತ್ತ ರಕ್ಷಾಬಂಧನ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಅಕ್ಷಯ್ ಕುಮಾರ್ ಚಿತ್ರಕ್ಕೆ ಕಥೆ ಬರೆದಿರುವ ಕನ್ನಿಕಾ ಧಿಲ್ಲೋನ್, ಹಿಂದೂ ದೇವರ ಪೂಜೆ, ಧಾರ್ಮಿಕ ಆಚರಣೆಗಳನ್ನು ಈ ಹಿಂದೆ ಲೇವಡಿ ಮಾಡಿದ್ದವರು. ಹೀಗಾಗಿ ರಕ್ಷಾಬಂಧನ್ ಚಿತ್ರಕ್ಕೂ ಬಿಸಿ ತಟ್ಟಿದ್ದು ಮೊದಲ ದಿನದ ಕಲೆಕ್ಷನ್ 8 ಕೋಟಿ ಸಮೀಪ ಇದೆ. ಇದು ಅಕ್ಷಯ್ ವೃತ್ತಿ ಜೀವನದಲ್ಲಿ ಇತ್ತೀಚೆಗೆ ಸಿಕ್ಕಿರುವ ಅತ್ಯಂತ ಡಲ್ ಓಪನಿಂಗ್.