` ರಕ್ಷಾಬಂಧನಕ್ಕೆ ಅಪ್ಪು ರಾಖಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಕ್ಷಾಬಂಧನಕ್ಕೆ ಅಪ್ಪು ರಾಖಿ
ರಕ್ಷಾಬಂಧನಕ್ಕೆ ಅಪ್ಪು ರಾಖಿ

ಅಪ್ಪು.. ಹಿರಿಯರ ಪಾಲಿಗೆ ಮಗನಾಗಿ.. ಕಿರಿಯರ ಪಾಲಿಗೆ ಅಣ್ಣನಾಗಿ.. ಯುವಜನತೆಯ ಪಾಲಿಗೆ ಸ್ಫೂರ್ತಿಯಾಗಿದ್ದ ನಟ. ಬಡವರ ಪಾಲಿಗೆ ದೇವರಾಗಿದ್ದ ವಿಷಯ ಗೊತ್ತಾಗಿದ್ದು ಅಪ್ಪು ದೂರವಾದ ಬಳಿಕ. ಪುನೀತ್ ಅವರಲ್ಲಿ ಅಣ್ಣ-ತಮ್ಮಂದಿರನ್ನು ಅದೆಷ್ಟು ಜೀವಗಳು ಕಂಡಿವೆಯೋ.. ಗೊತ್ತಿಲ್ಲ. ಅಪ್ಪು ಈಗ ರಕ್ಷಾ ಬಂಧನವಾಗಿದ್ದಾರೆ.

ಇದೇ ಆಗಸ್ಟ್ 11-12ಕ್ಕೆ ರಾಖಿ ಹಬ್ಬವಿದೆ.  ತಂಗಿಯರು ಅಣ್ಣನಿಗೆ.. ಅಕ್ಕಂದಿರು ತಮ್ಮನಿಗೆ ರಾಖಿ ಕಟ್ಟಿ ರಕ್ಷಾಬಂಧನ ಮಾಡುತ್ತಾರೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಅಪ್ಪು ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿರೋದು ಈ ಬಾರಿಯ ರಕ್ಷಾಬಂಧನದ ವಿಶೇಷ. ಹಾಗೆ ನೋಡಿದರೆ.. ರಕ್ಷಾಬಂಧನ ಕನ್ನಡಿಗರಿಗೆ ಹೊರಗಿನಿಂದ ಬಂದ ಹಬ್ಬ. ಉತ್ತರ ಭಾರತೀಯರಿಂದ ಬಂದು ಇಲ್ಲಿಯೂ ಜನಪ್ರಿಯವಾಗಿರುವ ಹಬ್ಬ. ನಮ್ಮಲ್ಲಿ ನಾಗರಪಂಚಮಿಯಂದೇ ಅಣ್ಣ-ತಂಗಿ, ಅಕ್ಕ-ತಮ್ಮ ಹಬ್ಬ ನಡೆಯುತ್ತೆ. ಆ ದಿನ ಕಂಕಣ ಕಟ್ಟುತ್ತಾರೆ. ಆದರೆ.. ಸೋದರ ಸೋದರಿಯರ ಹಬ್ಬಕ್ಕೆ.. ಭಾಷೆ..ಪ್ರದೇಶಗಳ ಗಡಿಯಾದರೂ ಏಕೆ ಅಲ್ಲವೇ.. ಈ ಬಾರಿಯ ಹಬ್ಬಕ್ಕೆ ಅಪ್ಪು ಕೂಡಾ ಇರುತ್ತಾರೆ.