Print 
alia bhat, ranbir kapoor,

User Rating: 0 / 5

Star inactiveStar inactiveStar inactiveStar inactiveStar inactive
 
ಈ ನಟಿಯ ಗರ್ಭಿಣಿ ಫೋಟೋಗೆ ಒಂದು ಕೋಟಿ..!
Alia Bhat Image

ಫೋಟೋ ತೆಗೆಸಿಕೊಳ್ಳೋಕೆ ನಾವು ದುಡ್ಡು ಕೊಡ್ಬೇಕು. ಆದರೆ.. ಆ ಫೋಟೋಗೆ ಒಂದು ಕೋಟಿ ಸಿಕ್ಕರೆ.. ಹೋಗ್ ಹೋಗ್ರಿ.. ಏನ್ ತಮಾಷಿ ಮಾಡ್ತೀರಿ ಅನ್ಬೇಡಿ.. ಇದು ಸತ್ಯ.

ಬಾಲಿವುಡ್ ನಟಿ ಆಲಿಯಾ ಭಟ್ ಫೋಟೋಗೆ ಒಂದು ಕೋಟಿಯ ಡಿಮ್ಯಾಂಡ್ ಬಂದಿದೆ. . ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಆಲಿಯಾ, ಇನ್ಸ್ಸ್ಟಾಗ್ರಾಮ್ನಲ್ಲಿ 68.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಾಲಿವುಡ್ನ ಈ ಕ್ಯೂಟ್ ಈಗ ಗರ್ಭಿಣಿ.ಆ ಫೋಟೋಗೆ ಆಲಿಯಾ 1 ಕೋಟಿ ಚಾರ್ಜ್ ಮಾಡ್ತಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

ಸಿನಿಮಾವೊಂದಕ್ಕೆ 15ರಿಂದ 18 ಕೋಟಿ ಪಡೆಯೋ ಆಲಿಯಾ ಬಳಿ 500 ಕೋಟಿಗೂ ಹೆಚ್ಚು ಆಸ್ತಿ ಇದೆ. ಆದರೇ.. ಫೋಟೋ ಕೊಟ್ರೆ ದುಡ್ಡು ಬರುತ್ತೆ ಅಂದ್ರೆ ಅವರಾದ್ರೂ ಯಾಕೆ ಬಿಡ್ತಾರೆ ಅಲ್ವಾ..? ಅಂದಹಾಗೆ ಆಲಿಯಾ ಇದೂವರೆಗೆ ಹೆಚ್ಚೂ ಕಮ್ಮಿ ಎರಡು ಸಾವಿರ ಪೋಸ್ಟ್ ಹಾಕಿದ್ದಾರೆ. ಹಾಗಂತ.. ಅವರು ಹಾಕಿದ ಎಲ್ಲ ಪೋಸ್ಟುಗಳಿಗೂ ಕೋಟಿ ಕೋಟಿ ಬರಲ್ಲ. ಗರ್ಭಿಣಿ ಫೋಟೋಗೆ ಮಾತ್ರ.. ಅಷ್ಟು ದುಡ್ಡು ಕೊಡ್ತಾರಂತೆ..

ಅಪ್ಪ ಆಗೋದು ರಣ್ಬೀರ್ ಕಪೂರ್. ಅಮ್ಮ ಆಗೋದು ಆಲಿಯಾ ಭಟ್. ದುಡ್ಡು ಕೊಡೋದು ಸೋಷಿಯಲ್ ಮೀಡಿಯಾ ಕಂಪೆನಿ. ಯಾಕೆ ಅಂದ್ರೆ.. ಅದನ್ನು ನೋಡಿ.. ಖುಷಿಯಾಗಿ ಲೈಕ್ಸ್ ಒತ್ತೋದು ಫ್ಯಾನ್ಸ್. ಆ ಲೈಕ್ಸು.. ಕಮೆಂಟ್ಸು.. ಆಲಿಯಾಗೆ ತಂದುಕೊಡೋದು ಒಂದು ಕೋಟಿ..

ಏನು ಮಾಯವೋ.. ಏನು ಮರ್ಮವೋ.. ಹಣವಂತರಿಗೇ ಹಣ ಸೇರುವುದೂ..ದೂ..ದೂ..