ಕನ್ನಡ ಸಿನಿಮಾಗಳಿಗೆ ಈಗ ಇಡೀ ವಿಶ್ವದಾದ್ಯಂತ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಹೀಗಾಗಿಯೇ ಗಣೇರ್ಶ ಮತ್ತು ಯೋಗರಾಜ್ ಭಟ್ ಜೋಡಿಯ ಗಾಳಿಪಟ 2 ಚಿತ್ರ ಆಸ್ಟ್ರೇಲಿಯಾ, ಅಮೆಇರಕ ಸೇರಿದಂತೆ ವಿಶ್ವದ ಹಲವೆಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಬುಕ್ಮೈ ಶೋನಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದೂ ಜೋರಾಗಿಯೇ ಇದೆ. ಭಟ್ಟರು ಮತ್ತು ಗಣಿ ಜೋಡಿ ಮತ್ತೊಮ್ಮೆ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮಾರ್ನಿಂಗ್ ಶೋ 6 ಗಂಟೆಗೇ ಶುರು ಮಾಡಲು ಸಿದ್ಧತೆಯಾಗುತ್ತಿದೆ.
ಗಣೇಶ್ & ಭಟ್ಟರ ಕಾಂಬಿನೇಷನ್ ಜೊತೆ ಶರ್ಮಿಳಾ ಮಾಂಡ್ರೆ-ಪವನ್, ದಿಗಂತ್-ಸಂಯುಕ್ತಾ ಮೆನನ್ ಜೋಡಿಯೂ ಇದೆ. ಗಾಳಿಪಟ ಬಂದಾಗ ಗಣೇಶ್ ಅವರಿಗೆ ಒಂದು ಕೋಟಿ ಸಂಭಾವನೆ ಕೊಡಲಾಗಿತ್ತು.ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ದಾಖಲೆ ಇವತ್ತಿಗೂ ಗಣೇಶ್ ಹೆಸರಲ್ಲೆ ಇದೆ. ಆ ಗಾಳಿಪಟ 175 ದಿನ ಓಡಿತ್ತು. ಈಗ ಈ ಗಾಳಿಪಟ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿ ನಿಂತಿದೆ.
ಆಗಸ್ಟ್ 12ರಂದು ವಿಶ್ವದೆಲ್ಲೆಡೆ ಗಾಳಿಪಟ 2 ಹಾರಲಿದೆ. ಒಂದು ಕ್ಯೂಟ್ ಲವ್ ಸ್ಟೋರಿಯಂತೂ ಪಕ್ಕಾ. ಜೊತೆಗೆ ಸ್ನೇಹ ಸಂದೇಶವೂ ಇರಲಿದೆ. ಭಟ್ಟರ ಜೊತೆ ಈ ಬಾರಿ ಸಂಗೀತದ ಮೋಡಿ ಮಾಡಿರುವುದು ಅರ್ಜುನ್ ಜನ್ಯಾ. ಗಾಳಿಪಟ ಹಾರೋದು ನೋಡೋಕೆ ರೆಡಿಯಾಗಿ..