ಗಾಳಿಪಟದಲ್ಲಿ ಡೈಸಿ ಬೋಪಣ್ಣ ಟೀಚರ್. ಗಣೇಶ್ ಸ್ಟೂಡೆಂಟ್ ಅಲ್ಲ. ಅಲ್ಲಿ ಅದೊಂಥ....ರಾ ಲವ್ ಸ್ಟೋರಿಯಿತ್ತು. ಇಲ್ಲಿ ಪವನ್ ಸ್ಟೂಡೆಂಟ್. ಶರ್ಮಿಳಾ ಮಾಂಡ್ರೆ ಟೀಚರ್. ಇದು ಇನ್ನೊಂದ್‍ತರಾ ಲವ್ ಸ್ಟೋರಿ... ಇದು ಭಟ್ಟರ ಗಾಳಿಪಟ 2.
ಟೀಚರ್ ಹೌದು. ಹಾಗಂತ ತುಂಬಾ ವಯಸ್ಸಾದ ಟೀಚರ್ ಅಲ್ಲ. ಹಾಗಂತ ಇದು ಕಂಪ್ಲೀಟ್ ಸ್ಟೂಡೆಂಟ್ ಟೀಚರ್ ಲವ್ ಸ್ಟೋರಿಯೂ ಅಲ್ಲ. ಪವನ್ ಕುಮಾರ್ ಪಾಯಿಂಟ್ ಆಫ್ ವ್ಯೂನಿಂದ ಲವ್ ಶುರುವಾಗುತ್ತೆ. ಶಾಲೆ, ಕಾಲೇಜುಗಳಲ್ಲಿ ಪ್ರತಿಯೊಬ್ಬರಿಗೂ ಟೀಚರ್ ಮೇಲೆ ಕ್ರಷ್ ಇರುತ್ತದೆ. ಅದನ್ನೇ ಯೋಗರಾಜ್ ಭಟ್ರು ತೆರೆ ಮೇಲೆ ಲವಲವಿಕೆಯಿಂದ ತಂದಿದ್ದಾರೆ ಎಂದಿರೋದು ಶರ್ಮಿಳಾ ಮಾಂಡ್ರೆ.
ಜೊತೆಗೆ ಗಾಳಿಪಟದಲ್ಲಿ ಶರ್ಮಿಳಾ ಮಾಡಿರೋ ಫಿಶ್ ಡೈ ಸಖತ್ತಾಗಿ ಕ್ಲಿಕ್ ಆಗಿದೆ. ಗಾಳಿಪಟಕ್ಕೂ ನಾನೇ ಹೀರೋಯಿನ್ ಆಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು. ಈಗ ಮತ್ತೊಮ್ಮೆ ಗಾಳಿಪಟ 2ನಲ್ಲಿ ಹೀರೋಯಿನ್. ಅದೇ ಖುಷಿ. ನನಗೂ ತೆರೆ ಮೇಲೆ ಬಂದು ತುಂಬಾ ವರ್ಷಗಳಾಗಿವೆ. ಹೀಗಾಗಿ ನನಗೂ ಕ್ಯೂರಿಯಾಸಿಟಿ ಇದೆ ಎಂದಿದ್ದಾರೆ ಶರ್ಮಿಳಾ ಮಾಂಡ್ರೆ.
ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಬೇರೆಯದೇ ಕ್ರೇಜ್ ಸೃಷ್ಟಿಸಿದೆ.