ಟ್ರೇಲರ್ ನೋಡಿದವರಿಗೆ ಅಷ್ಟೂ ಕುತೂಹಲ ಹುಟ್ಟಿಸದಿದ್ದರೆ ಹೇಗೆ..? ನಿರ್ದೇಶಕ ಶಶಾಂಕ್ ಟ್ರೇಲರಿನಲ್ಲೇ ಒಂದು ಗಟ್ಟಿ ಕಥೆಯ ಸುಳಿವು ಕೊಟ್ಟಿದ್ದಾರೆ. ಅಲ್ಲಿ ಇಬ್ಬರು ಪ್ರೇಮಿಗಳು. ಅವಳು ಚೆನ್ನಾಗಿದ್ದಾಳೆಯೋ.. ಮಾನಸಿಕ ಅಸ್ವಸ್ಥೆಯೋ.. ಆಥವಾ ಬುದ್ದಿ ಬೆಳವಣಿಗೆಯಾಗದ ಯುವತಿಯೋ.. ಕುತೂಹಲ ಉಳಿಸುತ್ತಾರೆ ಶಶಾಂಕ್. ಮಧ್ಯೆ ಮಧ್ಯೆ ಅವಳನ್ನು ಗುಣಮುಖಳನ್ನಾಗಿ ಮಾಡಿಸಲು ನಾಯಕ ಪಡುವ ಯಾತನೆ.. ಮಧ್ಯದಲ್ಲೊಂದು ಫೈಟ್.. ಅಲ್ಲೇನೋ ನಡೆಯಬಾರದ್ದು ನಡೆದು ಹೀರೋ ಸೇಡು ತೀರಿಸಿಕೊಳ್ಳುತ್ತಿರಬಹುದಾ..? ಮತ್ತೊಂದು ಕುತೂಹಲ..
ಲವ್ 360 ಚಿತ್ರದ ಟ್ರೇಲರ್.. ಹೀರೋ ಪ್ರವೀಣ್ ಹೊಸಬ. ನಾಯಕಿ ರಚನಾ ಇಂದರ್. ಲವ್ ಮಾಕ್ಟೇಲ್`ನ ಹೆಂಗೆ ನಾವು ಚೆಲುವೆ. ಅಭಿನಯ ಮಾತ್ರ.. ಹೃದಯ ಮುಟ್ಟುವಂತಿದೆ. ಏಕೆಂದರೆ ಅದು ಶಶಾಂಕ್ ಗರಡಿ. ತಮ್ಮದೇ ಬ್ಯಾನರ್‍ನಲ್ಲಿ ಹೊಸ ಹೀರೋನನ್ನು ಪರಿಚಯಿಸುತ್ತಿರೋ ಶಶಾಂಕ್ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಡಾ.ಮಂಜುಳಾ ಮೂರ್ತಿ. ಈಗಾಗಲೇ ಅರ್ಜುನ್ ಜನ್ಯಾ ಅವರ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯ ಮುಟ್ಟಿದೆ. ಸಿನಿಮಾ ಆಗಸ್ಟ್ 19ಕ್ಕೆ ಬರುತ್ತಿದೆ. ಕೆಆರ್‍ಜಿ ಸ್ಟುಡಿಯೋಸ್ ಲವ್ 360ಯನ್ನು ದೇಶದಾದ್ಯಂತ ವಿತರಿಸುತ್ತಿದೆ.