ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸುವ ಅಭಿಮಾನಿಗಳೆಷ್ಟಿದ್ದಾರೋ.. ಅಷ್ಟೇ ಟೀಕಿಸುವವರೂ ಇದ್ದಾರೆ. ಕಾರಣ ಸಿನಿಮಾ ಅಲ್ಲ, ಬೇರೆಯ ವಿಷಯ. ಈ ವಿಚಾರದಲ್ಲಿ ರಶ್ಮಿಕಾ ಅವರ ಚಿತ್ರಗಳು ರಿಲೀಸ್ ಆದಾಗಲೆಲ್ಲ ಅವರ ಚಿತ್ರಗಳನ್ನ ನೋಡಬೇಡಿ ಎಂಬ ಪುಟ್ಟೊದೊಂದು ಕ್ಯಾಂಪೇನ್ ಶುರುವಾಗುತ್ತದೆ. ಆದರೆ.. ಅದನ್ನು ಮೀರಿ ಸಿನಿಮಾ ಚೆನ್ನಾಗಿರುತ್ತವಾದ ಕಾರಣ ಸಿನಿಮಾ ಗೆಲ್ಲುತ್ತವೆ. ಆದರೆ, ಈ ಬಾರಿ ಹಾಗಾಗಲಿಲ್ಲ. ರಶ್ಮಿಕಾ ಅವರ ಹೊಸ ಚಿತ್ರವೊಂದನ್ನು ಕೆಲವು ಮುಸ್ಲಿಂ ರಾಷ್ಟ್ರಗಳು ನಿಷೇಧಿಸಿವೆ.
ಬಹರೈನ್, ಕುವೈತ್, ಯೆಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿ ನಟಿಸಿರೋ ಸೀತಾ ರಾಮಮ್ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶಗಳಿವೆ ಅನ್ನೋದು ಆ ಎಲ್ಲ ರಾಷ್ಟ್ರಗಳ ಆರೋಪ.
ಚಿತ್ರದಲ್ಲಿ ಹೀರೋ ಆಗಿರೋದು ದುಲ್ಕರ್ ಸಲ್ಮಾನ್. ನಾಯಕಿ ರಶ್ಮಿಕಾ ಮಂದಣ್ಣ. ಚಿತ್ರವನ್ನು ಮತ್ತೊಮ್ಮೆ ಸೆನ್ಸಾರ್ ಮಾಡಿ, ಪರಿಶೀಲಿಸಿ ಎಂದು ಚಿತ್ರತಂಡ ಗಲ್ಫ್ ರಾಷ್ಟ್ರಗಳ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದೆ.
ಮಲಯಾಳಂ ಸ್ಟಾರ್ ನಟ ಮಮ್ಮೂಟಿಯ ಪುತ್ರನಾಗಿರುವ ದುಲ್ಕರ್ ಚಿತ್ರಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ದೊಡ್ಡ ಮಾರ್ಕೆಟ್ ಇದೆ.