ಚಿತ್ರರಂಗದಲ್ಲಿ ವಿಶೇಷ ದಾಖಲೆ ಬರೆದ ಸಿನಿಮಾ 777 ಚಾರ್ಲಿ. ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದ 777 ಚಾರ್ಲಿ, ಕಲೆಕ್ಷನ್ ವಿಚಾರದಲ್ಲಿ ಡಬಲ್ ಖುಷಿ ಕೊಟ್ಟಿತ್ತು. 150 ಕೋಟಿಗೂ ಅಧಿಕ ಬಿಸಿನೆಸ್ ಮಾಡಿತ್ತು. ಧರ್ಮ ಮತ್ತು ಚಾರ್ಲಿಯ ಬಾಂಧವ್ಯ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು. ಜೂನ್ 10ಕ್ಕೆ ರಿಲೀಸ್ ಆಗಿದ್ದ ಚಾರ್ಲಿ ಯಶಸ್ವಿಯಾಗಿ 50 ದಿನ ಪೂರೈಸಿದ ನಂತರ ಈಗ ಒಟಿಟಿಗೆ ಬಂದಿದೆ.
ಕಿರಣ್ ರಾಜ್ ಅವರ ಕನಸಿನ ಕೂಸು 777 ಚಾರ್ಲಿ ಇಂದಿನಿಂದ ವೂಟ್ನಲ್ಲಿ ಸಿಗಲಿದೆ. 777 ಚಾರ್ಲಿಯ ಕನ್ನಡ ವರ್ಷನ್ ಮಾತ್ರ ಒಟಿಟಿಯಲ್ಲಿದೆ. ಉಳಿದ ಭಾಷೆಯ ಚಾರ್ಲಿ ಮಾರಾಟವಾಗಿದ್ದರೂ, ಅದರ ಮೇಲಿನ ಹಕ್ಕುಗಳನ್ನು ಖರೀದಿಸಿದವರಿಗೇ ಕೊಟ್ಟುಬಿಟ್ಟಿದ್ದಾರಂತೆ ರಕ್ಷಿತ್ ಶೆಟ್ಟಿ.
ಹಾಗಂತ ಥಿಯೇಟರಿನಿಂದ 777 ಚಾರ್ಲಿ ಹೊರಕ್ಕೇನೂ ಹೋಗಿಲ್ಲ. ಈಗಲೂ 10ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಶೋಗಳಿವೆ. ರಕ್ಷಿತ್ ಶೆಟ್ಟಿಯವರಿಗೆ ಅಲ್ಲಿಂದ ಈಗಲೂ ಒಳ್ಳೆಯ ಶೇರ್ ಬರುತ್ತಿದೆ. ಆದರೆ ರಿಲೀಸ್ ಆಗುವುದಕ್ಕೂ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಈಗ ಒಟಿಟಿಗೆ ಬಂದಿದ್ದಾನೆ 777 ಚಾರ್ಲಿ.