ಸಂಯುಕ್ತಾ ಹೆಗ್ಡೆ ಒಳ್ಳೆಯ ಡ್ಯಾನ್ಸರ್ ಅಷ್ಟೇ ಅಲ್ಲ, ಕ್ರೀಡಾ ಚಟುವಟಿಕೆಗಳಲ್ಲಿ ಎತ್ತಿದ ಕೈ. ಸದಾ ಏನಾದರೊಂದು ಸಾಹಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ಸಂಯುಕ್ತಾ ಹೆಗ್ಡೆ ಈಗ ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಅದೆಲ್ಲ ನಡೆದಿರೋದು ಕ್ರೀಮ್ ಸಿನಿಮಾ ಚಿತ್ರೀಕರಣದಲ್ಲಿ. ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ಸ್ಲಿಪ್ ಆಗಿ ಬಿದ್ದು ಕಾಲಿನ ಮೂಳೆ ಮುರಿದುಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ. ಸದ್ಯಕ್ಕೆ ಇನ್ನೊಂದು ತಿಂಗಳು ಬೆಡ್ ರೆಸ್ಟ್.
ನಾನು ಮಾರ್ಷಲ್ ಆಟ್ರ್ಸ್ ಕಲಿತಿದ್ದೇನೆ. ಈ ಸಿನಿಮಾದ ಈ ದೃಶ್ಯಕ್ಕಿಂತಲೂ ಕಠಿಣವಾದ ಅಪಾಯಕಾರಿ ಸ್ಟಂಟ್ಸ್ ಮಾಡಿದ್ದೇನೆ. ಹೀಗಾಗಿ ಡ್ಯೂಪ್ ಬಳಸೋಣ ಎಂದರೂ ನಾನೇ ಬೇಡ ಎಂದು ಹೇಳಿ ನಟಿಸಿದೆ. ಸ್ಲಿಪ್ ಆಯ್ತು ಎಂದಿದ್ದಾರೆ ಸಂಯುಕ್ತಾ ಹೆಗ್ಡೆ.
ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರೋ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಕ್ರೀಮ್ ಅಭಿಷೇಕ್ ಬಸಂತ್ ನಿರ್ದೇಶನದ ಸಿನಿಮಾ. ಸಂಯುಕ್ತಾ ಹೆಗ್ಡೆ ಜೊತೆ ಅರುಣ್ ಸಾಗರ್, ರೋಷನ್ ಮೊದಲಾದವರು ನಟಿಸುತ್ತಿದ್ದಾರೆ. ಸಂವಾರ್ದಿ ಪ್ರೊಡಕ್ಷನ್ಸ್‍ನಲ್ಲಿ ಡಿ.ಕೆ.ದೇವೇಂದ್ರ ನಿರ್ಮಿಸುತ್ತಿರೋ ಚಿತ್ರವಿದು.