` ಕೆಜಿಎಫ್ ಶತದಿನೋತ್ಸವ.. ಯಶ್ 19ನೇ ಚಿತ್ರೋತ್ಸವ ಯಾವಾಗ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kgf 2 image
yash in kgf

ಏಪ್ರಿಲ್ 14ಕ್ಕೆ ಶುರುವಾದ ದಿಗ್ವಿಜಯ ಯಾತ್ರೆ ಅದು. ಕೆಜಿಎಫ್ ಚಾಪ್ಟರ್ 2 ಆರ್ಭಟಕ್ಕೆ ದಾಖಲೆಗಳೆಲ್ಲ ಚಿಂದಿ ಚಿಂದಿಯಾಗಿ ಹೋದವು. ಬಾಕ್ಸಾಫೀಸ್‍ನ್ನೇ ನಡುಗಿಸಿದ ಚಿತ್ರ ಕೆಜಿಎಫ್ ಚಾಪ್ಟರ್, ಇಂಡಿಯಾದಲ್ಲಿ ಅತೀ ಹೆಚ್ಚು ಜನ ಥಿಯೇಟರಿನಲ್ಲಿ ನೋಡಿದ ಸಿನಿಮಾ ಎಂಬ ದಾಖಲೆಯನ್ನೂ ಬರೆಯಿತು. ಜುಲೈ 22ಕ್ಕೆ ಕೆಜಿಎಫ್ ಚಾಪ್ಟರ್ 2ಗೆ 100 ದಿನವೂ ತುಂಬಿತು. ಶತದಿನೋತ್ಸವ. ಆದರೆ.. ಅಭಿಮಾನಿಗಳ ಆ ಕಾಯುವಿಕೆಗೆ ಮಾತ್ರ ಉತ್ತರ ಸಿಕ್ಕಿಲ್ಲ.

ಪ್ರಶಾಂತ್ ನೀಲ್ ಆಗಲೇ ಸಲಾರ್`ನಲ್ಲಿ ಬ್ಯುಸಿಯಿದ್ದಾರೆ. ಅದು ಮುಗಿದ ನಂತರ ಎನ್‍ಟಿಆರ್ ಸಿನಿಮಾ ಶುರುವಾಗಲಿದೆ. ಇದರ ಮಧ್ಯೆ ಬಘೀರನಿಗೆ ಕಥೆ ಕೊಟ್ಟಿದ್ದಾರೆ.

ಇದು ಆರಂಭವಷ್ಟೇ ಎಂದಿದ್ದ ಹೊಂಬಾಳೆ ಬೆನ್ನು ಬೆನ್ನಿಗೆ ಚಿತ್ರಗಳನ್ನು ಘೋಷಿಸಿದೆ. ಎಲ್ಲ ಚಿತ್ರಗಳೂ ಒಂದಲ್ಲ ಒಂದು ಹಂತದಲ್ಲಿವೆ.

ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಒಂದಲ್ಲ ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ.. ಯಶ್ ಮಾತ್ರ ಉತ್ತರ ಕೊಟ್ಟಿಲ್ಲ.

ಯೂರೋಪ್‍ನಲ್ಲಿ ಪತ್ನಿ ಮಕ್ಕಳ ಸಮೇತ ಸುತ್ತುತ್ತಿರೋ ಯಶ್ ತಮ್ಮ 19ನೇ ಚಿತ್ರದ ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಡೈರೆಕ್ಟ್ ಮಾಡ್ತಾರಂತೆ.. ಇವರು ಪ್ರೊಡ್ಯೂಸ್ ಮಾಡ್ತಾರಂತೆ.. ಅನ್ನೋ ಅಂತೆ ಕಂತೆಗಳಿವೆ ಬರವೇ ಇಲ್ಲ. ಒಂದು ಸುದ್ದಿಯೂ ಅಧಿಕೃತವಾಗಿಲ್ಲ.

ಯಶ್ 19ನೇ ಚಿತ್ರೋತ್ಸವ ಯಾವಾಗ..? ಯಾವಾಗ..? ಯಾವಾಗ..?