ಶುದ್ಧ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗಿಲ್ಲ : ಶೇಕ್ಸ್‍ಪಿಯರ್
ಈ ಒಂದು ಸಾಲಿನೊಂದಿಗೇ ಶುರುವಾಗುವ ಲವ್ ಸ್ಟೋರಿಯಿದು. ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾದಂತಹ ಅಪ್ಪಟ ಪ್ರೇಮಕಥೆಗಳನ್ನು ನೀಡಿ ಗೆದ್ದಿರುವ ಶಶಾಂಕ್ ಈ ಬಾರಿ ಮತ್ತೊಂದು ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಲವ್ 360. ಆ ಚಿತ್ರದ ಮತ್ತೊಂದು ಹಾಡು ಬೋರ್ಗರೆವ ಕಡಲು..
ಹಾಡಿನ ಸಾಹಿತ್ಯ ಚೆಂದವಾಗಿದೆ. ಶಶಾಂಕ್ ಅವರದ್ದೇ ಪದಗಳು. ಆ ಪದಗಳನ್ನು ಅರ್ಜುನ್ ಜನ್ಯ ಸಂಗೀತ ಇನ್ನೊಂದು ಲೆವೆಲ್ಲಿಗೆ ಕೊಂಡೊಯ್ದರೆ.. ಇಡೀ ಹಾಡನ್ನು ನೋಡುಗರ ಮತ್ತು ಕೇಳುಗರೆ ಎದೆಗೆ ನಾಟಿಸಿರುವುದು ಗಾಯಕ ಕೀರ್ತನ್ ಹೊಳ್ಳ. ಒಂದು ಕಂಪ್ಲೀಟ್ ಭಾವತೀವ್ರತೆಯ ಹಾಡು..
ಈ ಚಿತ್ರದಲ್ಲಿ ಶಶಾಂಕ್ ಹೊಸಬರನ್ನಿಟ್ಟುಕೊಂಡೇ ಹೊರಟಿದ್ದಾರೆ. ಹೊಸಬರೆಂದರೆ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಪ್ರವೀಣ್ ಹೊಸ ಪರಿಚಯವಾದರೆ.. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ನಾಯಕಿ. ನಿರ್ಮಾಣದಲ್ಲಿ ಡಾ.ಮಂಜುಳಾ ಮೂರ್ತಿ, ಶಶಾಂಕ್ ಅವರೊಂದಿಗೆ ಕೈಜೋಡಿಸಿದ್ದಾರೆ.