ತುಳು, ಪರಭಾಷೆಯೇನಲ್ಲ. ಕನ್ನಡದ್ದೇ ಉಪಭಾಷೆ. ಕರಾವಳಿಯಲ್ಲಿ ಆ ಭಾಷೆಯ ಸೊಗಡು ಕೇಳುವುದೇ ಚೆಂದ. ಈಗ ಮಾನ್ಸೂನ್ ರಾಗ ಚಿತ್ರದಲ್ಲಿ ತುಳುವಿನಲ್ಲೇ ಒಂದು ಹಾಡು ಸಿದ್ಧವಾಗಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಮಾನ್ಸೂನ್ ರಾಗ ಚಿತ್ರದಲ್ಲಿನ ರಾಗ ಸುಧಾ ಇಂಟ್ರೊ ಸೀನ್‍ನ ಹಾಡು ಇರೋದು ತುಳುವಿನಲ್ಲಿ. ಹಾಡಿಗೆ ಹೆಜ್ಜೆ ಹಾಕಿರೋದು ತುಳು ಚಿತ್ರರಂಗದ ಸೆನ್ಸೇಷನ್ ಯಶಾ ಶಿವಕುಮಾರ್.
ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಹಾಡಿಗೆ ಸಾಹಿತ್ಯ ಒದಗಿಸಿರೋದು ಗಣೇಶ್ ಉಪಾಧ್ಯ. ಎ.ಆರ್.ವಿಖ್ಯಾತ್ ನಿರ್ಮಾಪಕರಾಗಿದ್ದು ಎಸ್.ಎ.ರವೀಂದ್ರನಾಥ್ ನಿರ್ದೇಶನವಿದೆ. ಮಾನ್ಸೂನ್ ರಾಗ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ.
ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರೋ ಚಿತ್ರದಲ್ಲಿ ಸುಹಾಸಿನಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.