` ಸಾಯಿ ಪಲ್ಲವಿಯ ಕನ್ನಡ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ರಾಯಭಾರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಾಯಿ ಪಲ್ಲವಿಯ ಕನ್ನಡ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ರಾಯಭಾರಿ
ಸಾಯಿ ಪಲ್ಲವಿಯ ಕನ್ನಡ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ರಾಯಭಾರಿ

ದಕ್ಷಿಣ ಕನ್ನಡದ ಲೇಡಿ ಸೂಪರ್ ಸ್ಟಾರ್`ಗಳಲ್ಲಿ ಒಬ್ಬರು ಸಾಯಿ ಪಲ್ಲವಿ. ತಮಿಳು, ತೆಲುಗು, ಮಲಯಾಳಂನಲ್ಲಿ ಸಾಯಿಪಲ್ಲವಿ ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇದೆ. ಈ ಸಾಯಿ ಪಲ್ಲವಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ. ಗಾರ್ಗಿ ಚಿತ್ರದ ಮೂಲಕ. ಈ ಚಿತ್ರಕ್ಕೆ ಸಾಯಿ ಪಲ್ಲವಿ ಸ್ವತಃ ಡಬ್ ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ. ಕನ್ನಡದ ಗಾರ್ಗಿಯನ್ನು ಕನ್ನಡಕ್ಕೆ ವಿತರಣೆ ಮಾಡುತ್ತಿರೋದು ರಕ್ಷಿತ್ ಶೆಟ್ಟಿ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಕನ್ನಡದ ಗಾರ್ಗಿಗೆ ರಕ್ಷಿತ್ ಶೆಟ್ಟಿ ರಾಯಭಾರಿ.

ಗರುಡ ಗಮನದ ನಂತರ ನನ್ನ ಹೃದಯ ಕಲಕಿದ ಸಿನಿಮಾ ಗಾರ್ಗಿ. ಈ ಚಿತ್ರ ನೋಡುತ್ತಿದ್ದರೆ ಗಾರ್ಗಿಯ ಪ್ರಪಂಚದೊಳಕ್ಕೆ  ಎಂಟ್ರಿ ಕೊಡುತ್ತೀರಿ. ಗೌತಮ್ ಈ ಚಿತ್ರವನ್ನು ನಿರ್ದೇಶಿಸಿರುವ ರೀತಿ, ದೃಶ್ಯಗನ್ನು ಕಟ್ಟಿಕೊಟ್ಟಿರುವ ರೀತಿ, ಸಾಯಿಪಲ್ಲವಿ.. ಎಲ್ಲವೂ ಈ ಚಿತ್ರವನ್ನು ಕನ್ನಡಕ್ಕೆ ತರುವಂತೆ ಮಾಡಿತು ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಗಾರ್ಗಿ ಸಿನಿಮಾ ನಿರ್ದೇಶಕ ಗೌತಮ್ ರಾಮಚಂದ್ರನ್ ಮೂಲತಃ ಬೆಂಗಳೂರಿನವರೇ. ಕನ್ನಡದವರೇ. ಈ ಹಿಂದೆ ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಸಿನಿಮಾ ರೀಮೇಕ್ ಮಾಡಿದ್ದ ಗೌತಮ್, ಈಗ ಗಾರ್ಗಿ ಚಿತ್ರದ ಮೂಲಕ ಕನ್ನಡಕ್ಕೆ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ.

ನಮ್ಮ ಚಿತ್ರಗಳನ್ನು ಬೇರೆ ಭಾಷೆಯವರು ತಮ್ಮ ತಮ್ಮ ನೆಲದಲ್ಲಿ ಬೆಂಬಲಿಸುತ್ತಿರುವಾಗ ಅವರ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ ರಕ್ಷಿತ್ ಶೆಟ್ಟಿ.